ಕೇರಳ: ಒಂದೇ ಕುಟುಂಬದ ಐವರು ಭೂಕುಸಿತದಿಂದ ಸಾವಿಗೀಡಾದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಥೋಡುಪೊಜಾ ಬಳಿ ನಡೆದಿದೆ.
ಕಂಜಾರ್ ನಿವಾಸಿಗಳಾದ ಥಂಕಮ್ಮ(80),ಪುತ್ರ ಸೋಮನ್ (52)ಪತ್ನಿ ಶಾಜಿ(50),ಪುತ್ರಿ ಶಿಮಾ(30) ಮತ್ತು ದೇವಾನಂದ್(5)ಮೃತಪಟ್ಟ ದುರ್ದೈವಿಗಳು.
ಮುಂಜಾನೆ ಮೂರರ ಸುಮಾರಿಗೆ ಘಟನೆ ನಡೆದಿದೆ. ಮೃತದೇಹಗಳನ್ನು ಅವಶೇಷಗಳಡಿಯಿಂದ ತೆಗೆಯಲಾಗಿದೆ.
ಪರ್ವತ ಪ್ರದೇಶವಾದ ಇಡುಕ್ಕಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಕಾಸರಗೋಡು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕೊಟ್ಟಾಯಂ,ನೆಡುಕುನ್ನಮನ್,ಕರುಕಾಚಲ್ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಗ್ನಿ ಶಾಮಕದಳ ಅನಾಹುತ ಪ್ರದೇಶಗಳಿಗೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿದೆ.
Post a Comment