ಮೂಡುಬಿದಿರೆ: ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು. ಮೂಡುಬಿದಿರೆಯ ಮಾಜಿ ಸೈನಿಕ ವೇದಿಕೆ (ರಿ.)ನ ಅಧ್ಯಕ್ಷ ಡೊಂಬಯ್ಯ ಶೆಟ್ಟಿ ದೀಪ ಬೆಳಗಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ಗಿಲ್ಬರ್ಟ್ ಬ್ರಗಾನ್ಜ ಮಾತನಾಡಿ, ಸೈನಿಕರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಈ ರೀತಿ ದೇಶ ಸೇವೆ ಮಾಡಲು ಎಲ್ಲರಿಗೂ ಅವಕಾಶ ಸಿಗುವುದಿಲ್ಲ, ಆದರೆ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಿರ್ವಹಿಸುವುದೇ ನಿಜವಾದ ದೇಶ ಸೇವೆ ಎಂದರು.
ಆಳ್ವಾಸ್ ಹೆಲ್ತ್ ಸೆಂಟರ್‍ನ ಖ್ಯಾತ ವೈದ್ಯ ಡಾ| ಸದಾನಂದ ನಾಯಕ್ ಮಾತನಾಡಿ, ಸೈನಿಕರನ್ನು ಉತ್ತಮವಾಗಿ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ ದೇಶದ ಪ್ರತಿಯೊಂದು ನಾಗರಿಕನ ಕರ್ತವ್ಯ. ಸೈನಿಕರಿಗೆ ಪ್ರೀತಿ, ಗೌರವ ನೀಡುವುದರಿಂದ ಅವರಲ್ಲಿಯೂ ಹೆಮ್ಮೆ ಮೂಡುತ್ತದೆ. ಕಾರ್ಗಿಲ್ ವಿಜಯ ದಿನಕ್ಕೆ ಮಾತ್ರ ಯೋಧರನ್ನು ಸ್ಮರಿಸುವುದು ಮಾತ್ರವಲ್ಲ ದಿನನಿತ್ಯದ ಜೀವನದಲ್ಲಿ ಅವರನ್ನು ಸ್ಮರಿಸಬೇಕು ಎಂದರು.
ಆಳ್ವಾಸ್ ಹೆಲ್ತ್ ಸೆಂಟರ್ ಆಡಳಿತ ನಿರ್ದೇಶಕ ಡಾ.ವಿನಯ ಆಳ್ವ, ಆಡಳಿತಾಧಿಕಾರಿ ಸುಬೇದಾರ್ ಭಾಸ್ಕರ್, ಮಾಜಿ ಯೋಧರು, ಆಳ್ವಾಸ್ ಹೆಲ್ತ್ ಸೆಂಟರ್‍ನ ವೈದ್ಯರುಗಳು ಹಾಗೂ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ನಿವೃತ್ತ ಯೋಧ ನವನಂದ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment