ಕಡಬ: ಧ್ವಜಾರೋಹಣದ ವೇಳೆ ಕುಸಿದು ಬಿದ್ದು ಅಸ್ವಸ್ಥಗೊಂಡ ನಿವೃತ್ತ ಸೈನಿಕ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟ ಘಟನೆಯೊಂದು ಕಡಬದಲ್ಲಿ ನಡೆದಿದೆ.
ಕುಟ್ರುಪಾಡಿ ಗ್ರಾ.ಪಂ. ವತಿಯಿಂದ ಹಳೆ ಸ್ಟೇಷನ್ ಅಮೃತ ಸರೋವರದ ಬಳಿ ನಿವೃತ್ತ ಸೈನಿಕ ಗಂಗಾಧರ ಗೌಡ ಅವರು ಧ್ವಜ ವಂದನೆಯ ಮಾಹಿತಿ ನೀಡಿ ಧ್ವಜಾರೋಹಣಕ್ಕೆ ಸಿದ್ದವಾಗುತ್ತಿದ್ದ ವೇಳೆ ಗಂಗಾಧರ ಗೌಡ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದ ವೇಳೆ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Post a Comment