ಮಂಗಳೂರು: ವಿಟ್ಲ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಟ್ಲ ಗೃಹರಕ್ಷಕ ದಳ ಘಟಕದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಹರ್ ಘರ್ ತಿರಂಗ (ಮನೆ ಮನೆಗಳಲ್ಲಿ ರಾಷ್ಟ್ರಧ್ವಜ) ಅಭಿಯಾನವನ್ನು ಭಾನುವಾರ (ಆ.7) ಆಚರಿಸಲಾಯಿತು.
ವಿಟ್ಲ ಘಟಕದ ಗೃಹರಕ್ಷಕರಿಗೆ ರಾಷ್ಟ್ರಧ್ವಜವನ್ನು ಹಂಚಿ, ಮನೆ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಆಗಸ್ಟ್ 13 ರಿಂದ 15 ರಂದು ಹಾರಿಸಬೇಕು, ಅರಳಿಸಬೇಕು, ಗೌರವಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರುರವರು ನುಡಿದರು.
ಈ ಸಂದರ್ಭದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಗಿಡ ನೆಡುವ ಕಾರ್ಯದ ಜತೆಗೆ ಪೋಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ ನೆಟ್ಟ ಗಿಡ ಮರವಾಗಿ ನಿಂತಾಗ ವನಮಹೋತ್ಸವ ಕಾರ್ಯ ಅರ್ಥಪೂರ್ಣವಾಗುತ್ತದೆ, ಹವಾಮಾನ ವೈಪರೀತ್ಯ ಹೋಗಲಾಡಿಸಲು ಗಿಡ ನೆಡುವ ಅಗತ್ಯವಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವ ಹೊಣೆ ನಮ್ಮ ಮೇಲಿದೆ ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಎಂದು ಸಮಾದೇಷ್ಟರು ನುಡಿದರು.
ಈ ಕಾರ್ಯಕ್ರಮದಲ್ಲಿ ವಿಟ್ಲ ಘಟಕದ ಪ್ರಭಾರ ಘಟಕಾಧಿಕಾರಿಯವರಾದ ಶ್ರೀ ಸಂಜೀವ ಮತ್ತು ವಿಟ್ಲ ಘಟಕದ ಗೃಹರಕ್ಷಕ ಗೃಹರಕ್ಷಕಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment