ಮಂಗಳೂರು: ಆಜಾದೀ ಕೀ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿಶೇಷ ಅಭಿಯಾನ ಹರ್ ಘರ್ ತಿರಂಗಾ ಸಂಭ್ರಮದಲ್ಲಿ ನಾವೆಲ್ಲರೂ ಭಾರತೀಯರು ಭಾಗಿಯಾಗಿ ಭಾರತೀಯತ್ವವನ್ನು ಮೆರೆಸೋಣ. ರಾಷ್ಟ್ರ ಧ್ವಜವನ್ನು ಆಗಸ್ಟ್ 13 ರಿಂದ 15 ರವರೆಗೆ ಮೂರು ದಿನಗಳ ಕಾಲ ನಮ್ಮ ಮನೆಗಳಲ್ಲಿ ಅರಳಿಸೋಣ ಮತ್ತು ರಾಷ್ಟ್ರ ಪ್ರೇಮವನ್ನು ಮೆರೆಯೋಣ ಎಂದು ಕರೆ ನೀಡಿದರು.
ಭಾನುವಾರದಂದು ನಗರದ ಬಾರೆಬೈಲ್ ಬಡಾವಣೆಯ ಗ್ರೀನ್ ಎಕರೆ ಲೇ ಔಟ್ ನಲ್ಲಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ನಗರದ ಚೀಫ್ ಟ್ರಾಫಿಕ್ ವಾರ್ಡನ್ ಫ್ರೋ ಸುರೇಶ್ ನಾಥ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಡಾವಣೆಯ ಎ ಎಸ್ ಭಟ್, ಅರುಣ್ ಕೊಯ್ಲೋ, ಶ್ರೀ ಶಶಿಧರ್, ಶ್ರೀ ಮಹೇಶ್, ಶ್ರೀ ಕೃಷ್ಣಪ್ಪ, ಶ್ರೀ ಡಾ ದೀಪಕ್ ಪೈ, ಶ್ರೀಮತಿ ಡಾ ರಾಜಶ್ರೀ ಮೋಹನ್, ಶ್ರೀ ರಾಜೇಂದ್ರ, ಶ್ರೀ ಮಾಧವ ಉಳ್ಳಾಲ, ಶ್ರೀ ದೇವದಾಸ್ ಪೈ, ಶ್ರೀ ಶ್ರೀಕೃಷ್ಣ ಭಟ್ ಮತ್ತು ಗೃಹ ರಕ್ಷಕ ದಳದ ಸಮಾದೇಷ್ಟ ಶ್ರೀ ಡಾ ಮುರಲಿ ಮೋಹನ್ ಚೂಂತಾರು ಮುಂತಾದವರು ಉಪಸ್ಥಿತರಿದ್ದರು.
ಬಡಾವಣೆಯ ಎಲ್ಲಾ ಮನೆಗಳಿಗೆ ರಾಷ್ಟ್ರ ಧ್ವಜವನ್ನು ನೀಡಲಾಯಿತು. ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment