ಚಿತ್ರದುರ್ಗ : ಬೆಲಗೂರಿನಿಂದ ಶ್ರೀರಾಂಪುರಕ್ಕೆ ಹೋಗುತ್ತಿದ್ದಾಗ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿ ತೆರಳುತ್ತಿದ್ದ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆಯೊಂದು ನಡೆಯಿತು.
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ತಾಲೂಕಿನ ಗರಗದ ಬಳಿ ಅಪಘಾತ ನಡೆದಿದ್ದು. ಮೃತ ವ್ಯಕ್ತಿಯನ್ನು ಪುನೀತ್ (32)ಎಂದು ಗುರುತಿಸಲಾಗಿದೆ.
ಪುನೀತ್ ಹೊಸದುರ್ಗದ ಮಾಜಿ ಶಾಸಕನ ಬಿ.ಜಿ ಗೋವಿಂದಪ್ಪ ಅವರ ಸಹೋದರನ ಪುತ್ರ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಶ್ರೀರಾಂಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿತ್ರದುರ್ಗ ಜಿಲ್ಲೆಯ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
Post a Comment