ಬೆಂಗಳೂರು : ಉದ್ಯಮಿಗೆ ಹನಿಟ್ರಾಪ್ ಆರೋಪದ ಹಿನ್ನೆಲೆ ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಯುವರಾಜ್ ಅವರನ್ನು ಹುಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಟ ಯುವರಾಜ್ ಬೆಂಗಳೂರು ಮೂಲದ ಉದ್ಯಮಿಗೆ ಹನಿಟ್ರಾಪ್ ಮಾಡಿದ್ದ ಎನ್ನಲಾಗಿದ್ದು, ಜೆಪಿ ನಗರ ನಿವಾಸಿ ಯುವರಾಜ್ ಅಲಿಯಾಸ್ ಯುವ ಮಿಸ್ಟರ್ ಭೀಮರಾವ್ ಎಂಬ ಸಿನಿಮಾಕ್ಕೆ ಆರೋಪಿ ನಾಯಕನಾಗಿದ್ದ. ಎಲೆಕ್ಟ್ರಾನಿಕ್ ಸಿಟಿ ಮೂಲದ ಉದ್ಯಮಿಗೆ ನಟ ಯುವರಾಜ ಇಬ್ಬರು ಯುವತಿಯರ ಹೆಸರು ಬಳಸಿ ಚಾಟ್ ಮಾಡಿದ್ದ ಎನ್ನಲಾಗುತ್ತಿದೆ.
ನಂತರ ಉದ್ಯಮಿಗೆ ಭೇಟಿಯಾಗಿದ್ದ ತಾವು ಕ್ರೈಂ ಪೊಲೀಸರು ಎಂದು ಹೇಳಿ ಹೆದರಿಸಿ ಹಂತ ಹಂತವಾಗಿ ಒಟ್ಟು ಹದಿನಾಲ್ಕು ಲಕ್ಷಕ್ಕೂ ಹೆಚ್ಚಿನ ಹಣ ವಸೂಲಿ ಮಾಡಿದ್ದ. ಉದ್ಯಮಿಗೆ ಅನುಮಾನ ಬಂದು ಹಲಸೂರು ಗೇಟ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.
إرسال تعليق