ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಶಶಿಕುಮಾರ್ ವಿವಾಹ ಸಂಭ್ರಮ

ಬಿಗ್ ಬಾಸ್ ಸೀಸನ್ 6ರ ಸ್ಪರ್ಧಿ ಶಶಿಕುಮಾರ್ ವಿವಾಹ ಸಂಭ್ರಮ

 


ಬೆಂಗಳೂರು: ಮಾಡರ್ನ್‌ ರೈತ ಶಶಿ ಕುಮಾರ್ ಮತ್ತು ಸ್ವಾತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


ಕನ್ನಡ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್ 6ರ ಸ್ಪರ್ಧಿ ಶಶಿ ಕುಮಾರ್ ಮತ್ತು ಸ್ವಾತಿ ಆಗಸ್ಟ್‌ 7ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಬೆಂಗಳೂರಿನ ಕನ್ಷೆನ್ಷನ್ ಸೆಂಟರ್‌ವೊಂದರಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 6ರಂದು ಆರತಕ್ಷತೆ ಮತ್ತು 7ರಂದು ಮದುವೆ ನಡೆದಿದೆ.

ಶಶಿ ಕುಮಾರ್ ಮತ್ತು ಸ್ವಾತಿ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬಸ್ಥರು ಮಾತ್ರ ಭಾಗಿಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಶೇರ್ ಆಗಿದೆ.

0 Comments

Post a Comment

Post a Comment (0)

Previous Post Next Post