ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉದ್ಯೋಗದಲ್ಲಿದ್ದ ಯುವತಿ ನಾಪತ್ತೆ

ಉದ್ಯೋಗದಲ್ಲಿದ್ದ ಯುವತಿ ನಾಪತ್ತೆ

 



ಕಾಪು : ಮೊಬೈಲ್ ಶಾಪ್ ನ ಉದ್ಯೋಗಿ ಉದ್ಯಾವರ ಸಂಪಿಗೆನಗರದ ಯುವತಿ ನಾಪತ್ತೆಯಾದ ಘಟನೆಯೊಂದು ಆ.23 ರಂದು ನಡೆದಿದೆ.


ನೇತ್ರಾವತಿ (20) ಕಾಣೆಯಾದ ಯುವತಿ. ಕಳೆದ ಮೂರು ತಿಂಗಳಿನಿಂದ ಉದ್ಯಾವರದ ಸ್ಮಾರ್ಟ್ ಮೊಬೈಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ ನೇತ್ರಾವತಿ ಆ.22 ರಂದು ರಾತ್ರಿ ಊಟ ಮಾಡಿ ಮಲಗಿದ್ದು ಆ.23 ರಂದು ಬೆಳಗ್ಗೆ 5.30 ಕ್ಕೆ ಮನೆಯವರು ನೋಡಿದ್ದರು.


ಮನೆಯವರೆಲ್ಲರೂ ಸೇರಿ ಅಕ್ಕಪಕ್ಕದವರ ಮನೆಗಳಲ್ಲಿ ಸಂಬಂಧಿಕರ ಮನೆಗಳಲ್ಲಿ ಪರಿಚಯದವರಲ್ಲಿ ವಿಚಾರಿಸಿದ್ದು ಈವರೆಗೂ ಪತ್ತೆಯಾಗಿರುವುದಿಲ್ಲ ಎಂದು ಅವರ ಅಕ್ಕ ವಿಜಯಲಕ್ಷ್ಮೀ ಅವರು ಕಾಪು ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.


0 Comments

Post a Comment

Post a Comment (0)

Previous Post Next Post