ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 50 ಅಡಿ ಕೆಳಗೆ ಕುಸಿದ ಮನೆ; ಕುಟುಂಬದ ಸದಸ್ಯರು ಪಾರು

50 ಅಡಿ ಕೆಳಗೆ ಕುಸಿದ ಮನೆ; ಕುಟುಂಬದ ಸದಸ್ಯರು ಪಾರು

 



ಚಂದ್ರಾಪುರ(ಮಹಾರಾಷ್ಟ್ರ): ಮನೆಯೊಂದು 50 ಅಡಿ ಕೆಳಗೆ ಕುಸಿದಿರುವ ಘಟನೆಯೊಂದು ಚಂದ್ರಾಪುರದ ಘುಗೂಸ್ ಪ್ರದೇಶದಲ್ಲಿ ನಡೆದಿದೆ.


ಕುಟುಂಬ ಸದಸ್ಯರು ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಒಂದು ಸಣ್ಣ ಹೊಂಡ ಬಿದ್ದಿತು. ಬಳಿಕ ವೇಗವಾಗಿ ಮಣ್ಣು ಕುಸಿಯಲಾರಂಭಿಸಿತು. ಏನೋ ಅನಾಹುತ ಸಂಭವಿಸಲಿದೆ ಎಂದು ತಿಳಿದ ಮನೆಯ ಸದಸ್ಯರು ಹೊರ ಬಂದಿದ್ದು, ಕ್ಷಣಾರ್ಧದಲ್ಲಿ ಮನೆ ನೆಲಕ್ಕುರುಳಿದೆ.


ಈ ಪ್ರದೇಶದಲ್ಲಿ ಬ್ರಿಟಿಷರ ಕಾಲದಲ್ಲಿ ಕಲ್ಲಿದ್ದಲು ಗಣಿ ಇತ್ತು ಎನ್ನಲಾಗುತ್ತಿದೆ. ಇದೀಗ ಒಂದು ಮನೆ ನೆಲಕ್ಕುರುಳಿರುವುದರಿಂದ ಈ ಭಾಗದ ನಾಗರಿಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನೂ ಕೆಲವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿಯಾಗಿದೆ.


ಬ್ರಿಟಿಷರ ಕಾಲದಲ್ಲಿ, ಘುಗೂಸ್​​ನಲ್ಲಿ ರಾಬರ್ಟ್‌ಸನ್ ಇಂಕ್ಲೈನ್ ಕಲ್ಲಿದ್ದಲು ಗಣಿ ಇತ್ತು. ತೆರೆದ ಹೊಂಡಗಳಿಂದ ಗಣಿಗಾರಿಕೆ ಮಾಡಲಾಗಿತ್ತು. ಆ ಸಮಯದಲ್ಲಿ ನಗರದ ವಿಸ್ತರಣೆ ಹೆಚ್ಚಾಗಿ ಗಣಿ ಬಳಿ ನಾಗರಿಕರು ಮನೆ ಕಟ್ಟಿಕೊಂಡಿದ್ದಾರೆ. ಸದ್ಯ ಇಡೀ ಘುಗೂಸ್ ನಗರವು ಭೂಗತ ಕಲ್ಲಿದ್ದಲು ಗಣಿ ಮೇಲೆ ನೆಲೆಗೊಂಡಿದೆ.


ಘಟನೆಯ ಬಳಿಕ ಅಮರಾಯಿ ವಾರ್ಡ್​ನ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ. 


ಮಾಹಿತಿ ಪಡೆದ ಶಾಸಕ ಕಿಶೋರ್ ಜಾರ್ಗೆವಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಸದ್ಯ ಘಟನೆಯ ಅಧ್ಯಯನಕ್ಕೆ ಭೂ ಸಮೀಕ್ಷಾ ತಂಡ ಆಗಮಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.


0 تعليقات

إرسال تعليق

Post a Comment (0)

أحدث أقدم