ಸುಳ್ಯ: ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಬಸ್ ನಿಲ್ದಾಣದಲ್ಲಿಯೇ ಮೃತಪಟ್ಟ ಘಟನೆ ಮರ್ಕಂಜ ಎಂಬಲ್ಲಿ ನಡೆದಿದೆ.
ಮೃತರನ್ನು ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಲ್ಲೇಶ್ (56) ಎಂದು ಗುರುತಿಸಲಾಗಿದೆ.
ಇವರು ಮರ್ಕಂಜ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿ ವಿಶ್ರಾಂತಿ ಪಡೆಯಲು ಹೋದ ವೇಳೆ ತೀವ್ರ ಎದೆನೋವು ಉಂಟಾಗಿ ಉಸಿರಾಟದ ತೊಂದರೆಯಾಗಿದ್ದು, ತಕ್ಷಣವೇ ಬಸ್ಸು ನಿರ್ವಾಹಕ ಸಿದ್ದಪ್ಪರವರು ಮಲ್ಲೇಶ್ ನನ್ನು ಜೀಪಿನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದೊಯ್ದಿದಿದ್ದಾರೆ ಎನ್ನಲಾಗಿದೆ.
ಆದರೆ ಅಷ್ಟು ಹೊತ್ತಿಗಾಗಲೇ ಮಲ್ಲೇಶ್ ರವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
Post a Comment