ಹೊಳೆಹೊನ್ನೂರು: ಸಮೀಪದ ಅರಹತೊಳಲಿನಲ್ಲಿ ಸೋಮವಾರ ತಡರಾತ್ರಿ ಮನೆ ಗೋಡೆ ಕುಸಿದು ಬಿದ್ದಿದ್ದು, 13 ಜನ ಗಾಯಗೊಂಡಿದ್ದಾರೆ.
ಆ ಮನೆಯಲ್ಲಿ ನಾಲ್ಕೈದು ದಿನಗಳ ಹಿಂದೆ ವಿವಾಹ ಸಮಾರಂಭ ನಡೆದಿತ್ತು. ಮನೆಯಲ್ಲಿ ಮಲಗಿದ್ದ ಸಂಬಂಧಿಕರು ಹಾಗೂ ನವವಿವಾಹಿತನ ಮೇಲೆ ಮನೆಯ ಚಾವಣಿ ಕುಸಿದಿದೆ.
ನವವಿವಾಹಿತ ಗಣೇಶ್ ಹಾಗೂ ಆತನ ಅಕ್ಕನ ಮಗನಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಹೊಳೆ ಹೊನ್ನೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್‍ನಾಯ್ಕ್, ಭದ್ರಾವತಿ ತಹಶೀಲ್ದಾರ್ ಪ್ರದೀಪ್, ಮುಖಂಡರಾದ ರಾಜೇಶ್ ಪಾಟೀಲ್, ರಂಗನಾಥ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
Post a Comment