ಬೆಂಗಳೂರು: ಇಂದು ಸಾಯಿ ಕುಮಾರ್ಗೆ ಹುಟ್ಟುಹಬ್ಬದ ಸಂಭ್ರಮ. ಖಾಕಿ ಇವರ ಮೇಲೆ ಸೂಟ್ ಆಗುವಷ್ಟು ಮತ್ಯಾವ ನಟರಿಗೂ ಸೆಟ್ ಆಗಲ್ಲ. ಇಂದು ಸಾಯಿ ಕುಮಾರ್ 62ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಸಾಯಿ ಕುಮಾರ್ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟ. ಪೂರ್ಣ ಹೆಸರು ಸಾಯಿಕುಮಾರ್ ಶರ್ಮ ಪುಡಿಪೆಡ್ಡಿ. ತಂದೆ ಪಿ.ಜೆ.ಶರ್ಮಾ ನಟ ಮತ್ತು ಕಂಠದಾನ ಕಲಾವಿದರು. ತಾಯಿ ಕೃಷ್ಣ ಜ್ಯೋತಿ ಕನ್ನಡದ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
ಸಹೋದರ ರವಿಶಂಕರ್ ಮತ್ತು ಅಯ್ಯಪ್ಪ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಬಾಲ್ಯದಲ್ಲಿ ಕಂಠದಾನ ಕಲಾವಿದನಾಗಿ ಚಿತ್ರರಂಗ ಪ್ರವೇಶಿಸಿದ ಸಾಯಿಕುಮಾರ್ ಸುಮನ್ ,ರಾಜಶೇಖರ್ ಮುಂತಾದ ಕಲಾವಿದರಿಗೆ ಕಂಠದಾನ ನೀಡುತ್ತಿದ್ದರು.
ಸುರೇಖಾ ಎನ್ನುವವರನ್ನು ವಿವಾಹವಾಗಿರುವ ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಇವರ ಪುತ್ರ ಆದಿ ತೆಲಗು ಚಿತ್ರರಂಗದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ.
Post a Comment