ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ ಶಾಸಕ ಅಂಗಾರ ಇಂದು ಭಾರೀ ಮಳೆ ಹಾನಿಗೆ ಸಂಭವಿಸಿದ ಪ್ರದೇಶಗಳಿಗೆ ಭೇಟಿ

ಸುಳ್ಯ ಶಾಸಕ ಅಂಗಾರ ಇಂದು ಭಾರೀ ಮಳೆ ಹಾನಿಗೆ ಸಂಭವಿಸಿದ ಪ್ರದೇಶಗಳಿಗೆ ಭೇಟಿ

 


ಸುಬ್ರಹ್ಮಣ್ಯ : ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲಾ ಕಾರ್ಯ ನಿರ್ವಹಿಸಲಾಗುವುದು. ಅಪಪ್ರಚಾರ ಮಾಡುವವರು ಇದ್ದು, ಟೀಕೆಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕೆಲವೊಮ್ಮೆ ಮಾಧ್ಯಮದವರೂ ಬರೆಯುತ್ತಾರೆ, ಅವರು ಯಾವುದನ್ನು ಬರೆಯಬೇಕೋ ಅದನ್ನು ಬರೆಯುವುದಿಲ್ಲ.

ಕೆಲವೊಮ್ಮೆ ಆದ ಕೆಲಸವನ್ನು ಬರೆಯದೆ ಬಿಟ್ಟು ಬಿಡುತ್ತಾರೆ. ಅದೇ ಮಾಧ್ಯಮದವರು ಮತ್ತು ಇತರರು ವಾಟ್ಸಪ್‌ನಲ್ಲಿ ಸಮಸ್ಯೆಗಳ ಬಗ್ಗೆ ಮಾತ್ರವೇ ಬರೆಯುತ್ತಾರೆ.

ಆದ ಕೆಲಸಗಳ ಬಗ್ಗೆ ತಿಳಿಸುವ ಕೆಲಸ ಮಾಡುತ್ತಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರು ಮಾಧ್ಯಮಗಳ ಮೇಲೆಯೇ ಹರಿಹಾಯ್ದಿದ್ದಾರೆ.


ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭಾರೀ ಮಳೆಗೆ ಸಂಭವಿಸಿರುವ ಮಳೆ ಹಾನಿ ಪ್ರದೇಶಗಳಿಗೆ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಇಲ್ಲಿ ಶೀಘ್ರ ಸೇತುವೆ ನಿರ್ಮಾಣ ಮಾಡುವ ಭರವಸೆ ನೀಡಿದರು.


0 Comments

Post a Comment

Post a Comment (0)

Previous Post Next Post