ಬದಿಯಡ್ಕ: ಮುಳ್ಳೇರಿಯ ಹವ್ಯಕ ಮಂಡಲ ಮತ್ತು ಯುವವಿಭಾಗದ ಆಶ್ರಯದಲ್ಲಿ ಪ್ರೇರಣಾ ಎನ್ನುವ ಹೆಸರಿನಲ್ಲಿ ಒಂದು ದಿನದ ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾ ಪೀಠದಲ್ಲಿ ಭಾನುವಾರ (ಜು. 17) ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಯೋಜಿಸಲಾಯಿತು.
ಗುರುವಂದನೆಯೊಂದಿಗೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಮಂಡಲ ಉಪಾಧ್ಯಕ್ಷರಾದ ಶ್ರೀಮತಿ ಕುಸುಮ ಪೆರ್ಮುಖ ವಹಿಸಿದ್ದರು. ಶಾಸನತಂತ್ರದ ಸಂಘಟನಾ ಖಂಡದ ಶ್ರೀಸಂಯೋಜಕರು ಡಾ.ವೈ.ವಿ ಕೃಷ್ಣ ಮೂರ್ತಿ, ಮಾತೃತ್ವಮ್ ಪ್ರಧಾನೆ ಶ್ರೀಮತಿ ಈಶ್ವರಿ ಬೇರ್ಕಡವು, ಮುಳ್ಳೇರಿಯ ಮಂಡಲ ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಮಾತೃ ಪ್ರಧಾನೆ ಶ್ರೀಮತಿ ಗೀತಾ, ಪಳ್ಳತಡ್ಕ ವಲಯದ ಅಧ್ಯಕ್ಷ ಪರಮೇಶ್ವರ ಭಟ್ ಪೆರುಮುಂಡ, ಪಳ್ಳತಡ್ಕ ವಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆರೆಮೂಲೆ, ಗುಂಪೆ ವಲಯ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ, ಗುತ್ತಿಗಾರು ವಲಯ ಕಾರ್ಯದರ್ಶಿ ಶ್ರೀಕೃಷ್ಣ ಪೆರ್ಮುಖ, ವಿದ್ಯಾಪೀಠ ಸಂಚಾಲಕ ಜಯ ಪ್ರಕಾಶ ಪಜೀಲ, ವಿದ್ಯಾಪೀಠದ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಪಂಜಿತ್ತಡ್ಕ ಶುಭ ಹಾರೈಸಿದರು.
16 ಮಯಸ್ಸಿನಿಂದ 40 ವರ್ಷದ ವರೆಗೆ ಒಟ್ಟು 22 ಮಂದಿ ಭಾಗವಹಿಸಿದ್ದರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ಉಪಖಂಡದ ಶ್ರೀಸಂಯೋಜಕರಾದ ಶ್ರೀಪ್ರಕಾಶ ಕುಕ್ಕಿಲ ಮತ್ತು ಕಾರ್ಯವೇಕ್ಷಣೆ ಉಪಖಂಡದ ಶ್ರೀ ಸಂಯೋಜಕರು ಬಾಲ ಸುಬ್ರಹ್ಮಣ್ಯ ಭಟ್ ಇವರುಗಳ ಕಾರ್ಯಗಾರ ನಡೆಸಿಕೊಟ್ಟರು. ತರಬೇತಿಯ ಪರಿವೀಕ್ಷಕರಾಗಿ ಮತ್ತು ಸಹಾಯಕರಾಗಿ ಸೇವಾಖಂಡದ ಶ್ರೀಸಂಯೋಜಕರಾದ ವಿದ್ಯಾಲಕ್ಷ್ಮೀ ಕೈಲಂಕಜೆ, ಸುರೇಶ ಭಟ್ಟ ಸುರ್ಡೇಲು ಮತ್ತು ಶ್ರೀನಿಧಿ ಕುಕ್ಕಿಲ ಸಹಕರಿಸಿದರು.
ಕೌಶಲ್ಯಯುಕ್ತ ಮಾತು, ವಿವಿಧ ಚಟುವಟಿಕೆ, ಆಟಗಳು, ನಾಟಕ, ಮೂಲಕ 4 ಅವಧಿಗಳ ಕಾರ್ಯಾಗಾರದಲ್ಲಿ ಶ್ರೀಪ್ರಕಾಶ ಕುಕ್ಕಿಲ ಮತ್ತು ಬಾಲಸುಬ್ರಹ್ಮಣ್ಯ ಭಟ್ ಇವರು ಎಲ್ಲರನ್ನೂ ಮಂತ್ರಮುಗ್ದಗೊಳಿಸಿದರು
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಗೌರವಾರ್ಪಣೆ ಮತ್ತು ಕಾರ್ಯಾಗಾರದಲ್ಲಿ ಭಾಗವಹಿಸಿದವರಿಗೆ ಪ್ರಶಂಸನಾ ಪತ್ರ ನಿಡಿ ಅಭಿನಂದಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಮುಳ್ಳೇರಿಯ ಮಂಡಲ ಯುವ ವಿಭಾಗದ ಪ್ರಧಾನರಾದ ಕೇಶವಪ್ರಕಾಶ ಮುಣ್ಚಿಕಾನ ನಡೆಸಿದರು. ಶಾಂತಿ ಮಂತ್ರದೊಂದಿಗೆ ಸಭೆ ಸಂಪನ್ನಗೊಂಡಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ಧನ್ಯವಾದಗಳು
ReplyDeletePost a Comment