ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊಪ್ಪರಿಗೆ ಅಪ್ಪದ ಗಣಪನ ಸನ್ನಿಧಿ ಪೆರ್ಣಂಕಿಲ ದೇಗುಲ ನವೀಕರಣಾರ್ಥ ಶಿಲಾಮುಹೂರ್ತ

ಕೊಪ್ಪರಿಗೆ ಅಪ್ಪದ ಗಣಪನ ಸನ್ನಿಧಿ ಪೆರ್ಣಂಕಿಲ ದೇಗುಲ ನವೀಕರಣಾರ್ಥ ಶಿಲಾಮುಹೂರ್ತ


ಉಡುಪಿ: ನಾಡಿನ ಅತ್ಯಂತ ಪ್ರಾಚೀನ ಮತ್ತು ಪ್ರಸಿದ್ಧ ಗಣಪತಿ ಸಾನ್ನಿಧ್ಯಗಳಲ್ಲಿ ಒಂದಾಗಿರುವ ಹಾಗೂ ಕೊಪ್ಪರಿಗೆ ಅಪ್ಪದ ಹರಕೆ ಸೇವೆಯ ಕಾರಣಿಕದ ದಿವ್ಯ ಕ್ಷೇತ್ರ ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿಯ ಸನ್ನಿಧಿಯ ನವೀಕರಣಾರ್ಥ ಶಿಲಾಪೂಜನವು ಇತ್ತೀಚೆಗೆ ನೆರವೇರಿತು.


ಉಡುಪಿಯ ಪೇಜಾವರ ಮಠದ ಅಧೀನದಲ್ಲಿರುವ ದೇವಳದ ಕೆಲಭಾಗ ತೀರಾ ಜೀರ್ಣಾವಸ್ಥೆಯಲ್ಲಿರುವುದರಿಂದ ಭಕ್ತ ಜನರ ಸಹಕಾರದೊಂದಿಗೆ ಸುಮಾರು 7 ಕೋಟಿ ರೂ ವೆಚ್ಚದಲ್ಲಿ ನವೀಕರಿಸುವ ಸಂಕಲ್ಪವನ್ನು ಮಾಡಲಾಗಿತ್ತು. ಇತ್ತೀಚೆಗೆ ಅಷ್ಟಮಂಗಲ ಪ್ರಶ್ನೆಯನ್ನಿಟ್ಟು ಕಂಡು ಬಂದ ದೋಷಗಳಿಗೆ ಪ್ರಾಯಶ್ಚಿತ್ತವನ್ನೂ ನಡೆಸಲಾಗಿದೆ.


ನವೀಕರಣದ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವರ ಸುತ್ತು ಪೌಳಿ ಮತ್ತು ಗಣಪತಿ ದೇವರಿಗೆ ಇದೇ ಮೊದಲಬಾರಿಗೆ ನೂತನ ಸುತ್ತುಪೌಳಿ, ಯಾಗ ಶಾಲೆ, ಭೋಜನಶಾಲೆ, ಕೆರೆ ದುರಸ್ತಿ,  ನೂತನ ಧ್ಜಜಮರ ಪ್ರತಿಷ್ಠೆ  ಮುಖ ಮಂಟಪಗಳ ನಿರ್ಮಾಣ ನಡೆಯಲಿದೆ. ದೇವಳಕ್ಕೆ ಹೊಂದಿಕೊಂಡಿರುವ ಪೇಜಾವರ ಮಠದ ಶಾಖೆಯ ದುರಸ್ತಿಯನ್ನೂ ಮಾಡಲಾಗುವುದು.


ಸೋಮವಾರದಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಉಭಯ ಸಾನ್ನಿಧ್ಯಕ್ಕೆ ಪ್ರಾರ್ಥನೆ ಸಲ್ಲಿಸಿ ಶಿಲಾಪೂಜ‌ನ ನೆರವೇರಿಸಿದರು . ವಿದ್ವಾನ್ ಮಧುಸೂದನ ತಂತ್ರಿ, ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ಟರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ಮಠದ ಸಿಇಒ ಸುಬ್ರಹ್ಮಣ್ಯ ಭಟ್,ಶಾಸಕ ಲಾಲಾಜಿ ಆರ್ ಮೆಂಡನ್, ಉದ್ಯಮಿ ಹರಿದಾಸ ಭಟ್, ಗುರ್ಮೆ ಸುರೇಶ್ ಶೆಟ್ಟಿ, ಶಾಮಲಾ ಕುಂದರ್, ಯಶ್ಪಾಲ್ ಸುವರ್ಣ, ಕುದಿ ವಸಂತ ಶೆಟ್ಟಿ, ಸದಾನಂದ ನಾಯಕ್, ಸತ್ಯಾನಂದ ನಾಯಕ್, ಮಾಜಿ ಜಿಪಂ ಸದಸ್ಯೆ ಚಂದ್ರಿಕಾ ನಾಯ್ಕ್, ದೇವಳದ ವ್ಯವಸ್ಥಾಪಕ ಸುರೇಶ ತಂತ್ರಿ ಇಂದು ಶೇಖರ ಹೆಗಡೆ, ಶಿಲೆಯ ಕೆಲಸದ ಗುತ್ತಿಗೆದಾರ ಎಲ್ಲೂರು ವಿಷ್ಣುಮೂರ್ತಿ ಭಟ್, ಆಸುಪಾಸಿನ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಅರ್ಚಕ ವರ್ಗ, ಸಿಬಂದಿ ಮತ್ತು ದೊಡ್ಡ ಸಂಖ್ಯೆಯಲ್ಲಿ ಗ್ರಾಮಸ್ಥರು ಮತ್ತು ಪರವೂರ ಭಕ್ತರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post