ಮಂಗಳೂರು: ಪ್ರಾದೇಶಿಕ ತರಬೇತಿ ಕೇಂದ್ರ, ದೇವರ ಬೆಳಕೆರೆ ಹರಿಹರ ತಾಲೂಕು, ದಾವಣಗೆರೆ ಇಲ್ಲಿ ದಿನಾಂಕ: 03-06-2022 ರಿಂದ 15-06-2022 ರವರೆಗೆ 13 ದಿನಗಳು ನಡೆದ ಗೃಹರಕ್ಷಕಿಯರ “ಪುನರ್ಮನನ ತರಬೇತಿ”ಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಗೃಹರಕ್ಷಕರು ಭಾಗವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಘಟಕದ ಗೃಹರಕ್ಷಕಿಯರಾದ ತ್ಯಾಗವಲ್ಲಿ, ಮೆಟಲ್ ನಂ. 36, ದಿವ್ಯಾ, ಮೆಟಲ್ ನಂ. 69, ಭಾರತಿ ಮೆಟಲ್ ನಂ. 221, ನಿಶ್ಮಿತಾ ಮೆಟಲ್ ನಂ. 863 ಇವರುಗಳು ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿರುತ್ತಾರೆ.
ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕಿ ತ್ಯಾಗವಲ್ಲಿ, ಮೆಟಲ್ ನಂ. 36 ಮಂಗಳೂರು ಘಟಕ ಇವರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಅಭಿನಂದಿಸಿರುತ್ತಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment