ಮೂಡಬಿದಿರೆ: ಹವ್ಯಕ ಮಹಾ ಸಭಾ ಮೂಡುಬಿದಿರೆಯ ಮಹಾಸಭೆಯ ಶುಭಾವಸರದಲ್ಲಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಕ್ಷಾರ ಚಿಕಿತ್ಸೆ ಮತ್ತು ಮಿಶ್ರಪದ್ಧತಿ ತಜ್ಞ, ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಸುದೀರ್ಘ ಕಾಲದ ಪ್ರಾಂಶುಪಾಲ ಮತ್ತು ಡೀನ್ ಆಗಿದ್ದ ಡಾ ಸುರೇಶ ನೆಗಳಗುಳಿ ಇವರನ್ನು ಅವರ ಸೇವೆಯನ್ನು ಗೌರವಿಸಿ ಶಾಲು, ಹಾರ, ಸ್ಮರಣಿಕೆ ಸಹಿತವಾಗಿ ಸನ್ಮಾನಿಸಲಾಯಿತು.
ಡಾ ಸುಬ್ರಹ್ಮಣ್ಯ ಪದ್ಯಾಣರ ವೃಂದದ ಯಕ್ಷಗಾನ ತಾಳ ಮದ್ದಳೆ, ಚಿಣ್ಣರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುವಲ್ಲದೆ ಎಸ್‌ಎಸ್‌ಎಲ್‌ಸಿ, ಪಿ.ಯು ಪರೀಕ್ಷಾ ಸಾಧಕರು ಹಾಗೂ ಡಾಕ್ಟರೇಟ್ ಪಡೆದ ಡಾ ಮಹೇಶ ಟಿ, ಡಾ ಸೌಮ್ಯಾ ಸರಸ್ವತಿ ಮತ್ತು ಡಾ ಪ್ರವೀಣ ಪದ್ಯಾಣ ಈ ಸಂದರ್ಭದಲ್ಲಿ ಗೌರವಿಸಲಾಯಿತು.
ಹಿಂದಿನ ಅಧ್ಯಕ್ಷ ರಾಮಕೃಷ್ಣ ಶಿರೂರು ಮತ್ತು ಶಿಕಾರಿಪುರ ಈಶ್ವರ ಭಟ್ ಅವರನ್ನು ಅಭಿನಂದಿಸಲಾಯಿತು. ನೂತನ ಅಧ್ಯಕ್ಷ ಶ್ರೀ ವಿನೋದ್ ಕಾರ್ಯಕ್ರಮ ನೆರವೇರಿಸಿದರು. ಕಾರ್ಯದರ್ಶಿ ಶಂಕರ ಭಟ್ ವಂದಿಸಿದರು.
ಕರುಣಾಕರ, ಗುರಿಕಾರ ವೆಂಕಟೇಶ್ವರ ಉಪಾಧ್ಯಾಯ ಕೆರೆಗದ್ದೆ ವಿನಾಯಕ, ಮತ್ತು ಪಶುಪತಿ ಶಾಸ್ತ್ರಿ, ಡಾ ಮಹೇಶ್, ಡಾ ಸೌಮ್ಯಾ ಸರಸ್ವತಿ, ಡಾ ಪ್ರವೀಣ ಪದ್ಯಾಣ ಸಹಿತ ಗಣ್ಯರು ವೇದಿಕೆಯನ್ನಲಂಕರಿಸಿದ್ದರು.
ಕೇಶವ ಭಟ್ ಕಜೆ, ಹರಿಯಪ್ಪ ಭಟ್, ಡಾ ಲೀಲಾ ಭಟ್, ಸಾವಿತ್ರಿ ಶಾಸ್ತ್ರಿ ಮುಂತಾದ ಸುಮಾರು ಇನ್ನೂರೈವತ್ತು ಮಂದಿ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಸಮಾರಂಭ ನೆರವೇರಿತು. ಭೋಜನದೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment