ಕಾಸರಗೋಡು: ಮುಳ್ಳೇರಿಯಾ ಲಯನ್ಸ್ ಕ್ಲಬ್ ವತಿಯಿಂದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮುಳ್ಳೇರಿಯ ಕಲ್ಯಾಣ್ ಆಡಿಟೋರಿಯಂನಲ್ಲಿ ನಡೆಯಿತು.
ಲಯನ್ ಡಾ. ಓ ವಿ ಸನಲ್ PMJF, ಲಯನ್ ವಿನೋ ಕೆ ಜೆ, ಲಯನ್ ಶಾಫಿ ಚೂರಿಪ್ಪಳ್ಳ, ಲಯನ್ ರಾಜಲಕ್ಷ್ಮಿ ಟೀಚರ್ ಗುರುರಾಜ್ ಕಾಸರಗೋಡು ಮುಂತಾದ ಗಣ್ಯರು ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಡಾ. ವಾಣಿಶ್ರೀ ಕಾಸರಗೋಡು ಅವರನ್ನು ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಗೌರವ ಸ್ಮರಣಿಕೆ ನೀಡಿ ಸತ್ಕರಿಸಿದರು.
ಡಾ. ವಾಣಿಶ್ರೀ ಮಾತನಾಡುತ್ತಾ ಲಯನ್ಸ್ ಕಾರ್ಯಕ್ರಮ ನಡೆಸುವಾಗ ನಮ್ಮ ಕನ್ನಡ ಭಾಷೆಗೂ ಪ್ರಾಮುಖ್ಯತೆ ಕೊಡಬೇಕು. ಕನ್ನಡ ಭಾಷೆಯಲ್ಲಿಯೂ ಪ್ರಸ್ತಾವನೆ ಆಗಬೇಕು ಎಂದು ಹೇಳಿದರು. ಅವರ ಪ್ರಸ್ತಾವನೆಗೆ ಕ್ಲಬ್ ಪದಾಧಿಕಾರಿಗಳು ಮುಂದಿನ ಕಾರ್ಯಕ್ರಮಗಳಲ್ಲಿ ಕನ್ನಡಕ್ಕೂ ಆದ್ಯತೆ ನೀಡುವೆವು. ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಅಳವಡಿಸಿಕೊಂಡು ನಡೆಸುವೆವು ಎಂದು ಕನ್ನಡ ಭಾಷೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಭರವಸೆಯನ್ನಿತ್ತರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment