ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಜನರನ್ನು ಓದಿನೆಡೆಗೆ ಮತ್ತೆ ಕರೆ ತರುವುದು ಮಾಧ್ಯಮಗಳ ಮುಂದಿರುವ ದೊಡ್ಡ ಸವಾಲು

ಜನರನ್ನು ಓದಿನೆಡೆಗೆ ಮತ್ತೆ ಕರೆ ತರುವುದು ಮಾಧ್ಯಮಗಳ ಮುಂದಿರುವ ದೊಡ್ಡ ಸವಾಲು

ಸುಳ್ಯದಲ್ಲಿ ಪತ್ರಿಕಾ ದಿನಾಚರಣೆ: ಸನ್ಮಾನ


ಸುಳ್ಯ: ಕೊರೋನಾ ಕಾಲದಲ್ಲಿ ಅಡಿಮೇಲಾಗಿದ್ದ ಪತ್ರಿಕೋದ್ಯಮವು ಭರವಸೆ ಮೂಡಿಸಿ ಮತ್ತೆ ಚಿಗುರಿ ಕೊಳ್ಳುತ್ತಿದೆ. ಜನರನ್ನು ಓದಿನೆಡೆಗೆ ಮತ್ತೆ ಕರೆ ಬೇಕಾಗಿರುವುದು ಪತ್ರಿಕೋದ್ಯಮದ‌ ಮುಂದಿರುವ ದೊಡ್ಡ ಸವಾಲು ಎಂದು ಹಿರಿಯ ಪತ್ರಕರ್ತ, ಕಣಿಪುರ ಯಕ್ಷಗಾನ ಮಾಸಪತ್ರಿಕೆಯ ಸಂಪಾದಕ ಎಂ.ನಾ. ಚಂಬಲ್ತಿಮಾರ್ ಹೇಳಿದ್ದಾರೆ.


ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜು.20 ರಂದು ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು 'ಪ್ರಚಲಿತ ಪತ್ರಿಕೋದ್ಯಮ'ದ ಕುರಿತು ಉಪನ್ಯಾಸ ನೀಡಿದರು. ಕಾಲಘಟ್ಟಕ್ಕೆ ಅನುಸಾರವಾಗಿ ಮಾಧ್ಯಮಗಳು ಯೋಚನೆ ಮಾಡಿ  ಪರಿಷ್ಕರಣೆಕೊಳ್ಳಬೇಕು‌. ಜನರ ಧ್ವನಿಯಾಗಿ ಓದುಗರನ್ನು ತನ್ನೆಡೆಗೆ ಸೆಳೆಯುವ ಹಾಗೆ ರೂಪುಗೊಳ್ಳಬೇಕು ಎಂದರು.


ಮುದ್ರಣ ಮಾಧ್ಯಮಕ್ಕೆ ಎಂದೂ ಸಾವಿಲ್ಲ. ಆದರೆ ಮುದ್ರಣ‌‌ ಮಾಧ್ಯಮಗಳು ಕಾಲಕ್ಕನುಸಾರವಾಗಿ ಬದಲಾವಣೆ ಆಗಬೇಕಾಗಿದೆ. ಪತ್ರಕರ್ತರು ಕೂಡ ಬದಲಾವಣೆಗೆ ಒಗ್ಗಿಕೊಂಡು ಅಪ್‌ಡೇಟ್ ಆಗಬೇಕು. ಜನರು ಮುದ್ರಣ ಮಾಧ್ಯಮಗಳ ಭಾಷೆ ಮತ್ತು ಸುದ್ದಿ ಸಂಸ್ಕೃತಿಯೆಡೆಗೆ ಮರಳಿ ಬರಲಿದ್ದಾರೆ. ಅದಕ್ಕಾಗಿ ಪತ್ರಕರ್ತರು ಉತ್ತಮ ಓದಿನ‌ ಮೂಲಕ ತಮ್ಮ ಬರವಣಿಗೆ ಮತ್ತು ಭಾಷೆಯನ್ನು ಬೆಳೆಸಿಕೊಂಡು ಆಕರ್ಷಕ ವೃತ್ತಿ ಶೈಲಿಯನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು‌.


ಕಾರ್ಯಕ್ರಮವನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಸೀತಾರಾಮ ರೈ ಸವಣೂರು  ಉದ್ಘಾಟಿಸಿದರು.

ಹಿರಿಯ ಪತ್ರಕರ್ತೆ ಚಂದ್ರಾವತಿ ಬಡ್ಡಡ್ಕ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮನಾಭ ಮುಂಡೋಕಜೆ ಅಧ್ಯಕ್ಷತೆ ವಹಿಸಿದ್ದರು.


ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಇಬ್ರಾಹಿಂ ಅಡ್ಕಸ್ಥಳ, ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಮುಖ್ಯ ಅತಿಥಿಗಳಾಗಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ಕೃಷ್ಣ ಬೆಟ್ಟ ಉಪಸ್ಥಿತರಿದ್ದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯದರ್ಶಿ ಗಂಗಾಧರ ಕಲ್ಲಪಳ್ಳಿ ಸ್ವಾಗತಿಸಿ, ಸುಳ್ಯ ತಾಲೂಕು ಸಂಘದ ಮಾಜಿ ಅಧ್ಯಕ್ಷ ದುರ್ಗಾಕುಮಾರ್ ನಾಯರ್‌ಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ದಯಾನಂದ ಕೊರತ್ತೋಡಿ ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post