ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲ್ ಬೈಲ್ ನ 29 ನೇ ವರ್ಷದ ಪದಗ್ರಹಣ ಸಮಾರಂಭವು ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಜಿಲ್ಲಾ GLT ಸಂಯೋಜಕ ಕುಡ್ಪಿ ಅರವಿಂದ ಶೆಣೈ ಅವರು ಲೋಹಿತ್ ಶೆಟ್ಟಿ ಅಧ್ಯಕ್ಷತೆಯ ತಂಡದ ಪದಗ್ರಹಣ ನೆರವೇರಿಸಿದರು. "ಪ್ರತಿಷ್ಟಿತ ಕಲಾವಿದರ ಹಾಗೂ ಕಟ್ಟಡ ನಿರ್ಮಾಣಗಾರರನ್ನೊಳಗೊಂಡ ಕೊಡಿಯಾಲಬೈಲ್ ಕ್ಲಬ್ ಜಿಲ್ಲೆಯಲ್ಲಿ ಐದನೇ ಸ್ಥಾನ ಪಡೆದು ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸದಾ ಮುಂದಿದೆ" ಎಂದು ಅಭಿನಂದಿಸಿದರು.
ಕಾರ್ಯದರ್ಶಿಯಾಗಿ ಸನತ್ ಕುಮಾರ್ ಕದ್ರಿ, ಕೋಶಾಧಿಕಾರಿಯಾಗಿ ದೇವಾನಂದ, ಉಪಾಧ್ಯಕ್ಷರಾಗಿ ಪ್ರದೀಪ್ ಆಳ್ವ ಕದ್ರಿ ಪ್ರಮಾಣ ವಚನ ಸ್ವೀಕರಿಸಿದರು. ಆರು ನೂತನ ಸದಸ್ಯರನ್ನು ಲಯನ್ಸ್ ಪರಿವಾರಕ್ಕೆ ಸೇರ್ಪಡೆ ಗೊಳಿಸಲಾಯಿತು.
ನಿಕಟಪೂರ್ವ ಅಧ್ಯಕ್ಷ ಹಾಗೂ ನೂತನ ವಲಯಾಧ್ಯಕ್ಷ ಮೋಹನ ಕೊಪ್ಪಲ ಕದ್ರಿ ಹಾಗೂ ಕ್ಲಬ್ ನ ಸೇವಾಯೋಜನೆಗಳ ಪ್ರಧಾನ ಸಂಯೋಜಕ ಹಿರಿಯ ಸದಸ್ಯ ಕಿಶೋರ್ ಡಿ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಇದೇ ಸಂದರ್ಭದಲ್ಲಿ ವೀಲ್ ಚೇರ್ ಹಾಗೂ ದಿನಕರ ಸುವರ್ಣ ವಿದ್ಯಾನಿಧಿ ವಿತರಣೆ ಮಾಡಲಾಯಿತು.
ಲಿಯೋ ಪದಗ್ರಹಣ: ಸಚಿನ್ ಪೂಜಾರಿ, ಪ್ರಾರ್ಥನಾ, ಹರ್ಷಿತಾ ಹರೀಶ್ ನೇತೃತ್ವದ ಲಿಯೋ ಕ್ಲಬ್ ಪದಗ್ರಹಣದೊಂದಿಗೆ ಆರು ಹೊಸ ಲಿಯೋ ಸದಸ್ಯರ ಸೇರ್ಪಡೆ ಮಾಡಲಾಯಿತು.
ಜಿಲ್ಲಾ ಸಂಪುಟ ಕಾರ್ಯದರ್ಶಿ ಪಿ.ವಿ. ಅನಿಲ್ ಕುಮಾರ್, ದ್ವಿತೀಯ ಉಪ ರಾಜ್ಯಪಾಲೆ ಭಾರತಿ ಬಿ.ಎಮ್., ಮಾಜಿ ಲಯನ್ಸ್ ರಾಜ್ಯಪಾಲ ಅರುಣ್ ಶೆಟ್ಟಿ ಶುಭಾಶಂಸನೆಗೈದರು.
ಪ್ರಾಂತೀಯ ಅಧ್ಯಕ್ಷ ಮಾಜಿ ರಾಜ್ಯಪಾಲರಾದ ಆಲ್ವಿನ್ ಪ್ಯಾಟ್ರಿಕ್ ಪತ್ರಾವೋ, ಜೆ.ಕೆ.ರಾವ್, ರೊನಾಲ್ಡ್ ಗೋಮ್ಸ್, ಪ್ರಾಂತೀಯ ಅಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ, ಜಿಲ್ಲಾ ಸಂಪುಟ ಸಂಯೋಜಕ ಹರೀಶ್ ಆಳ್ವ ಉಪಸ್ಥಿತರಿದ್ದರು. ವಿನೂತನ್ ಕಲಿವೀರ್ ಪದಗ್ರಹಣ ಅಧಿಕಾರಿಯನ್ನು ಪರಿಚಯಿಸಿದರು. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು. ದೇವಾನಂದ ಧನ್ಯವಾದ ಸಮರ್ಪಿಸಿದರು.
إرسال تعليق