ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು; ಫಾಜಿಲ್ ಹತ್ಯೆ ಸಂಬಂಧಿಸಿ ಪೋಲಿಸರಿಂದ12 ಮಂದಿಯ ತೀವ್ರ ವಿಚಾರಣೆ

ಮಂಗಳೂರು; ಫಾಜಿಲ್ ಹತ್ಯೆ ಸಂಬಂಧಿಸಿ ಪೋಲಿಸರಿಂದ12 ಮಂದಿಯ ತೀವ್ರ ವಿಚಾರಣೆ

 


ದಕ್ಷಿಣಕನ್ನಡ : ಮಂಗಳೂರಿನ ಸುರತ್ಕಲ್‌ ಬಳಿ ಫಾಜಿಲ್‌ ಹತ್ಯೆ ಸಂಬಂಧಿಸಿ ಪೊಲೀಸರಿಂದ 12 ಜನರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

ಸುರತ್ಕಲ್ ನಲ್ಲಿ ನಿನ್ನೆ ಗುರುವಾರ ರಾತ್ರಿ ಯುವಕನ ಮೇಲೆ ಮಾರಕಾಯುಧಗಳಿಂದ ದಾಳಿ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


ಮಂಗಳ ಪೇಟೆಯ ಫಾಜಿಲ್‌ ಎಂ‌ಬ ಯುವಕ ಚಪ್ಪಲಿ ಖರೀದಿಗೆ ಬಂದಿದ್ದ, ಫಾಜಿಲ್‌ ಮೇಲೆ ಅಂಗಡಿಯ ಎದುರಿನ ಜಗಲಿಯಲ್ಲೇ ತಲವಾರಿನಿಂದ ದಾಳಿ ನಡೆಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.


ಭಾರೀ ಪ್ರಮಾಣದಲ್ಲಿ ರಕ್ತ ಸ್ರಾವ ವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಫಾಜಿಲ್‌ನನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆ ಸಾವನ್ನಪ್ಪಿದ್ದಾನೆ.

  ಹೆಚ್ಚಿನ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.


0 تعليقات

إرسال تعليق

Post a Comment (0)

أحدث أقدم