ಮಂಗಳೂರು: ಮಂಗಳೂರಿನ ಲಯನ್ಸ್ ಸೇವಾ ಮಂದಿರದಲ್ಲಿ ವೈದ್ಯರ ದಿನದ ನೆನಪಿಗಾಗಿ ಮಂಗಳೂರಿನ ಮಂಗಳಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಮೂಲವ್ಯಾಧಿ ಕ್ಷಾರ ಚಿಕಿತ್ಸಾ ತಜ್ಞ, ಪ್ರಾಧ್ಯಾಪಕ ಮತ್ತು ಬರಹಗಾರ ಲ| ಡಾ ಸುರೇಶ್ ನೆಗಳಗುಳಿ, ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ರಕ್ತ ಕಣ ತಜ್ಞ ಲ| ಡಾ ಪ್ರಶಾಂತ್ ಬಿ ಮತ್ರು ಖ್ಯಾತ ಕ್ಯಾನ್ಸರ್ ಶಸ್ತ್ರ ಚಿಕಿತ್ಸಕ ಲ| ಡಾ ಕಾರ್ತಿಕ್ ಕೆ.ಎಸ್ ಇವರನ್ನು ಶಾಲು ಹಾರ ನೆನಪಿನ ಕಾಣಿಕೆ ಫಲ ಪುಷ್ಪ ಸಹಿತವಾಗಿ ಸನ್ಮಾನಿಸಲಾಯಿತು.
ಹಿಂದಿನ ಅಧ್ಯಕ್ಷ ಲ| ಜಗದೀಶ್ ಪೈ, ನಿಯೋಜಿತ ಅಧ್ಯಕ್ಷೆ ಲ| ಸುಮಿತ್ರಾ ವಿಜಯ ಶೆಟ್ಟಿ ಇವರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ಪದಾಧಿಕಾರಿಗಳಾದ ಲ| ರಿತೇಶ್ ಲ| ಶ್ರೀ ಶ್ರೀ ಧರ್ ಲ| ಸುಬ್ರಹ್ಮಣ್ಯ ಭಟ್ ಮತ್ತು ಪ್ರಸಕ್ತ ಸಾಲಿನ ಲಿಯೋ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಲ| ಎನ್ ಟಿ ರಾಜಾ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು ಮತ್ತು ಲ|ಡಾ ಪ್ರಶಾಂತ್ ಇವರು ವೈದ್ಯ ದಿನಾಚರಣೆಯ ಕಾರಣ ಹಾಗೂ ಮಹತ್ವಗಳನ್ನು ವಿಶದವಾಗಿ ವಿವರಿಸಿದರು. ವೈದ್ಯನಾದವನಿಗೆ ದೇಹಾಂತ್ಯ ತನಕವೂ ಸೇವಾವಧಿಯೇ ಆಗಿದ್ದು,ಬಂದ ರೋಗಿಗೆ ಆಯುಸ್ಸು ಕೊಡುವ ಹಾಗಿಲ್ಲದಿದ್ದರೂ ನೆಮ್ಮದಿ ಕೊಡಲು ಸಾಧ್ಯ ಎಂದರು.
ಲ| ಪ್ರಶಾಂತ್ ಪೈ ಲ| ಪೂಜಾ ಪೈ ಲ| ರಾಮ ಮುಗರೋಡಿ ಲ| ಶಂಕರನಾರಾಯಣ ಕಾರಂತ ಲ| ಸ್ವರ್ಣಲತಾ; ಲಿಯೋ ಇಂಚರ ಸಹಿತ ಹಲವು ಲಯನ್ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಬಳಿಕ ಧನ್ಯವಾದ ಸಮರ್ಪಣೆ ಹಾಗೂ ಉಪಾಹಾರ ಸಹಿತವಾಗಿ ಸಮಾರಂಭ ಪರಿಪೂರ್ಣವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق