ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾರತೀಯ ಯೋಧರ ಅಸೀಮ ಸಾಹಸಕ್ಕೆ ಗೌರವ ನಮನ: ಶಾಸಕ ವೇದವ್ಯಾಸ ಕಾಮತ್‌

ಭಾರತೀಯ ಯೋಧರ ಅಸೀಮ ಸಾಹಸಕ್ಕೆ ಗೌರವ ನಮನ: ಶಾಸಕ ವೇದವ್ಯಾಸ ಕಾಮತ್‌


ಮಂಗಳೂರು: ಭಾರತದ ಯೋಧರ ಅಸೀಮ ಸಾಹಸ, ಪರಾಕ್ರಮ ಜಗತ್ತಿನೆದುರು ತೆರೆದಿಟ್ಟ ದಿನವನ್ನು ಪ್ರತಿಯೊಬ್ಬ ಭಾರತೀಯರೂ ನೆನೆಯಲೇ ಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.


ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ರಥಬೀದಿ ಡಾ ಪಿ. ದಯಾನಂದ ಪೈ- ಪಿ. ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಗಿಲ್‌ ವಿಜಯ ದಿವಸ್ ಮತ್ತು ಅಗ್ನಿಪಥ್ ಅಭಿವಿನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಸೈನಿಕ ಶಕ್ತಿಯನ್ನು ಅನಾವರಣಗೊಳಿಸಿದ ಕಾರ್ಗಿಲ್ ವಿಜಯ ಅತ್ಯಂತ ಮಹತ್ವಪೂರ್ಣವಾದದ್ದು. ಯುದ್ಧದಲ್ಲಿ ಹುತಾತ್ಮರಾದ ಎಲ್ಲಾ ಯೋಧರನ್ನೂ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. 


ಕೇಂದ್ರ ಸರಕಾರವು ಸೈನ್ಯಕ್ಕೆ ಕಾಶ್ಮೀರದ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬಳಿಕ ಸೈನಿಕರ ಮೇಲೆ ನಡೆಯುತಿದ್ದ ದಾಳಿ, ನಿರಂತರ ಕಲ್ಲು ತೂರಾಟಗಳು ಬಹುತೇಕ ನಿಯಂತ್ರಣಕ್ಕೆ ಬಂದಿದೆ. ಒಂದು ಕಾಲದಲ್ಲಿ ಗಡಿ ಭಾಗದಲ್ಲಿ ಪಾಕಿಸ್ಥಾನದಿಂದ ಕಿರುಕುಳ ಅನುಭವಿಸುತಿದ್ದ ಸೈನಿಕರು ಇಂದು ಅಂತಹ ದಾಳಿಗೆ ಪ್ರತಿಯಾಗಿ ತಕ್ಕ ಪ್ರತ್ಯುತ್ತರ ನೀಡುತಿದ್ದಾರೆ ಎಂದು ಹೇಳಿದರು.


ಸಂಪನ್ಮೂಲ ವ್ಯಕ್ತಿಯಾಗಿ ನೌಕಾ ಪಡೆಯ ನಿವೃತ್ತ ಸೈನಿಕ ವಿಜಯನ್ ಅವರು ಅಗ್ನಿಪಥ್ ಹಾಗೂ ಭಾರತೀಯ ಸೈನ್ಯಕ್ಕೆ ಸೇರುವ ಕುರಿತು ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು‌. ಕಾರ್ಯಕ್ರಮದಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿದ ಭಾರತೀಯ ಸೈನ್ಯದ ನಿವೃತ್ತ ಸೈನಿಕರಾದ ಮೂರು ಪಡೆಯ ಸೈನಿಕರನ್ನು ಸನ್ಮಾನಿಸಲಾಯಿತು. 


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ‌ ಪ್ರಾಂಶುಪಾಲರಾದ ಡಾ. ಜಯಕರ್ ಭಂಡಾರಿ ವಹಿಸಿದ್ದರು‌. ನಿವೃತ್ತ ಸೈನಿಕ ಶಿವರಾಂ ಭಟ್, ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹಾಗೂ ನಿವೃತ್ತ ಸೈನಿಕ ಜೆಫ್ರಿ ರಾಡ್ರಿಗಸ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ರಾಜೇಂದ್ರ ಕುಮಾರ್, ರಮೇಶ್ ಹೆಗ್ಡೆ,ರಾಮಚಂದ್ರ ಭಟ್, ವಿಧ್ಯಾರ್ಥಿ ಕ್ಷೇಮಪಾಲಕರಾದ ಡೈ. ಸುಧಾಕರನ್ ಟಿ, ಡಾ. ನವೀನ್ ಕೊಣಾಜೆ ಕಾರ್ಯಕ್ರಮ ನಿರೂಪಿಸಿದರು‌ ಲೋಹಿತ್ ಸ್ವಾಗತಿಸಿ, ಶಿವಾನಿ ಅವರು ವಂದಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post