ಯಲ್ಲಾಪುರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸರಕು ತುಂಬಿದ ಲಾರಿಯೊಂದಕ್ಕೆ ಬೆಂಕಿ ತಾಗಿ ಲಾರಿ ಹೊತ್ತಿ ಉರಿದ ಘಟನೆಯೊಂದು ಶುಕ್ರವಾರ ಬೆಳಿಗ್ಗೆ 7.30 ಸುಮಾರಿಗೆ ನಡೆದಿದೆ.
ಸಿಮೆಂಟ್ ತುಂಬಿದ ಲಾರಿಯಾಗಿದ್ದು ಲಾರಿಯ ಲೈನರ್ ಹೀಟ್ ಆಗಿ ಬೆಂಕಿ ಕಾಣಿಸಿಕೊಂಡು ಬೆಂಕಿ ಉರಿಯಿತು.
ನಂತರ ಅಗ್ನಿಶಾಮಕದವರು ಸ್ಥಳಕ್ಕಾಗಮಿಸಿ ಬೆಂಕಿಯನ್ನು ಆರಿಸಿದ್ದಾರೆ. ಲಾರಿಯ ಬಹುತೇಕ ಭಾಗ ಸುಟ್ಟು ಕರಕಲಾಗಿದೆ. ಅದರಲ್ಲಿದ್ದ ಸಿಮೆಂಟಿಗೂ ಹಾನಿಯಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಯಾವುದೇ ರೀತಿಯಲ್ಲಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿಲ್ಲ.
Post a Comment