ಶಿವಮೊಗ್ಗ: ಕಳೆದ ಒಂದು ವಾರದಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತವಾಗಿದೆ.
ಭಾರಿ ಪ್ರಮಾಣದ ಮಣ್ಣು ಮತ್ತು ಮರ ರಸ್ತೆಗೆ ಬಿದ್ದು ಸಂಚಾರ ಸ್ಥಗಿತಗೊಂಡಿದೆ.
ಗುಡ್ಡ ಕುಸಿತವಾಗಿರುವುದರಿಂದ ಉಡುಪಿ ಕಡೆಯಿಂದ ಬರುವ ವಾಹನಗಳನ್ನು ಸೋಮೇಶ್ವರ ಚೆಕ್ ಪೋಸ್ಟ್ ಬಳಿ ಹಾಗು ಶಿವಮೊಗ್ಗ ಕಡೆಯಿಂದ ಹೋಗುವ ವಾಹನಗಳನ್ನು ಆಗುಂಬೆ ಚೆಕ್‌ಪೋಸ್ಟ್ ಹತ್ತಿರ ತಡೆಯಲಾಗುತ್ತಿದೆ.
ಈಗಾಗಲೇ ಶಿವಮೊಗ್ಗ-ಉಡುಪಿ ಎರಡೂ ಕಡೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಸಿಬ್ಬಂದಿಯ ಮೂಲಕ ಮಣ್ಣು ತೆರವು ಮಾಡುವ ಕಾರ್ಯ ನಡೆಸುತ್ತಿದ್ದಾರೆ.
Post a Comment