ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉದ್ಯಮಿ ಮನೆಯಲ್ಲಿ ಪಟಾಕಿ ಸ್ಫೋಟ; 6 ಮಂದಿ ಸಾವು 8ಮಂದಿಗೆ ಗಾಯ

ಉದ್ಯಮಿ ಮನೆಯಲ್ಲಿ ಪಟಾಕಿ ಸ್ಫೋಟ; 6 ಮಂದಿ ಸಾವು 8ಮಂದಿಗೆ ಗಾಯ

 


ಬಿಹಾರ: ಉದ್ಯಮಿಯ ಮನೆಯಲ್ಲಿ ಪಟಾಕಿ ಸ್ಫೋಟಗೊಂಡ ಪರಿಣಾಮ 6 ಮಂದಿ ಮೃತಪಟ್ಟು, 8 ಮಂದಿ ಗಾಯಗೊಂಡ ಘಟನೆಯೊಂದು ಬಿಹಾರದ ಸರನ್ ಜಿಲ್ಲೆಯ ಖುದಾಯಿ ಬಾಗ್ ಗ್ರಾಮದಲ್ಲಿ ನಡೆದಿದೆ.


ಸುಮಾರು ಒಂದು ಗಂಟೆಯವರೆಗೆ ನಿರಂತರವಾಗಿ ಪಟಾಕಿ ಸ್ಫೋಟಗೊಂಡಿದೆ ಎಂದು ಹೇಳಲಾಗಿದ್ದು, ಇದರಿಂದ ಉದ್ಯಮಿ ಶಬೀರ್ ಹುಸೇನ್ ಮನೆ ನದಿಯ ತಟದಲ್ಲಿದ್ದು , ಸ್ಫೋಟದಿಂದಾಗಿ ಮನೆಯ ಬಹುತೇಕ ಭಾಗ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ .

ಭಾರೀ ಸಂಖ್ಯೆಯ ಪಟಾಕಿಗಳನ್ನು ಮನೆಯೊಳಗೆ ಇಡಲಾಗಿತ್ತು. ಅದು ಸ್ಫೋಟಿಸಲು ಪ್ರಾರಂಭವಾದಾಗಿನಿಂದ ಸುಮಾರು 1 ಗಂಟೆಯವರೆಗೆ ನಿರಂತರವಾಗಿ ಸಿಡಿದಿದ್ದು, ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ .


ಗಾಯಗೊಂಡಿರುವ 8 ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ . ವಿಧಿವಿಜ್ಞಾನ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ .

0 Comments

Post a Comment

Post a Comment (0)

Previous Post Next Post