ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಶೀಘ್ರವೇ 1550 ಪವರ್ ಮ್ಯಾನ್ ನೇಮಕಾತಿಗೆ ಚಾಲನೆ

ಶೀಘ್ರವೇ 1550 ಪವರ್ ಮ್ಯಾನ್ ನೇಮಕಾತಿಗೆ ಚಾಲನೆ

 


ಬೆಂಗಳೂರು : ಉದ್ಯೋಗಾಕಾಂಕ್ಷಿಗಳಿಗೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಗುಡ್ ನ್ಯೂಸ್ ನೀಡಿದ್ದು, ಶೀಘ್ರವೇ 1550 ಪವರ್ ಮ್ಯಾನ್ ಗಳ ನೇಮಕಾತಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ 1375 ಮಂದಿ ಸ್ಟೇಷನ್ ಪರಿಚಾರಕ, ಕಿರಿಯ ಪವರ್ ಮ್ಯಾನ್ ಗಳಿಗೆ ನೇಮಕಾತಿ ಪತ್ರ ವಿತರಣೆ ಬಳಿಕ ಮಾತನಾಡಿದ ಸಚಿವರು, ಕೆಪಿಟಿಸಿಎಲ್ ಹಾಗೂ ವಿವಿಧ ಎಸ್ಕಾಂಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 1550 ಹುದ್ದೆಗಳಿಗೆ 2 ನೇ ಹಂತದಲ್ಲಿ ನೇಮಕಾತಿ ಶುರು ಮಾಡಲಾಗುತ್ತದೆ. ಜು.23 ಮತ್ತು 24 ರಂದು ಇದಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.


ಹಾಗೆಯೇ 1800 ಸ್ಟೇಷನ್ ಪರಿಚಾರಕರು ಹಾಗೂ ಕಿರಿಯ ಪವರ್ ಮ್ಯಾನ್ ಗಳ ನೇಮಕಾತಿಗಾಗಿ ಪ್ರಕ್ರಿಯೆ ನಡೆಸಿದ್ದು, ಈ ಪೈಕಿ 1375 ಮಂದಿ ಸೂಕ್ತ ದಾಖಲಾತಿ ನೀಡಿದ್ದರಿಂದ ನೇಮಕಾತಿ ಆದೇಶ ನೀಡಲಾಗಿದೆ. ಉಳಿದವರ ದಾಖಲಾತಿಗಳನ್ನು ಪರಿಶೀಲಿಸಿ ಆದೇಶ ಪ್ರತಿ ವಿತರಿಸಲಾಗುತ್ತದೆ ಎಂದರು.


0 Comments

Post a Comment

Post a Comment (0)

Previous Post Next Post