ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಳ್ಯ ; ವಿಷ ಸೇವಿಸಿ ಪೌರಕಾರ್ಮಿಕ ಆತ್ಮಹತ್ಯೆ

ಸುಳ್ಯ ; ವಿಷ ಸೇವಿಸಿ ಪೌರಕಾರ್ಮಿಕ ಆತ್ಮಹತ್ಯೆ



 ಸುಳ್ಯ : ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ದುಗಲಡ್ಕದಲ್ಲಿ ನಡೆದಿದೆ.


ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ದುಗಲಡ್ಕ ನೀರಬಿದಿರೆ ನಿವಾಸಿ ದೇವನಾಥ ಎಂದು ಗುರುತಿಸಲಾಗಿದೆ. 


ನಗರ ಪಂಚಾಯತ್ ನಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿ ಘಟಕದಲ್ಲಿ ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರು, ನಿನ್ನೆ ವಿಷ ಸೇವಿಸಿದ್ದು, ಕೂಡಲೇ ವಿಷಯ ತಿಳಿದ ಸ್ನೇಹಿತರು ಸುಳ್ಯದ ಆಸ್ಪತ್ರೆಗೆ ದಾಖಲಿಸಿದರು.


ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟು ಹೊತ್ತಿಗಾಗಲೇ ಮೃತಪಟ್ಟಿದ್ದಾರೆ. 


0 تعليقات

إرسال تعليق

Post a Comment (0)

أحدث أقدم