ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಗೃಹರಕ್ಷಕರಿಗೆ 'ಮೂಲ ಅಗ್ನಿಶಮನ' ತರಬೇತಿ

ಗೃಹರಕ್ಷಕರಿಗೆ 'ಮೂಲ ಅಗ್ನಿಶಮನ' ತರಬೇತಿ


ಮಂಗಳೂರು: ಗೃಹರಕ್ಷಕ ಮತ್ತು ಪೌರರಕ್ಷಣಾ ಅಕಾಡೆಮಿ, ಬೆಂಗಳೂರಿನಲ್ಲಿ ದಿನಾಂಕ: ಜು. 2ರಿಂದ 14 ರವರೆಗೆ 13 ದಿನಗಳು ನಡೆದ ಗೃಹರಕ್ಷಕರ “ಮೂಲ ಅಗ್ನಿಶಮನ ತರಬೇತಿ”ಯಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯ ಗೃಹರಕ್ಷಕರು ಭಾಗವಹಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಘಟಕದ ಗೃಹರಕ್ಷಕರಾದ ರಂಜಿತ್, ಮೆಟಲ್ ನಂ. 880 ಮತ್ತು ಮೂಲ್ಕಿ ಘಟಕದ ಪುಂಡಲೀಕ, ಮೆಟಲ್ ನಂ. 267 ಇವರು ಯಶಸ್ವಿಯಾಗಿ ತರಬೇತಿಯನ್ನು ಪೂರೈಸಿರುತ್ತಾರೆ.


ಇದರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ರಂಜಿತ್, ಮೆಟಲ್ ನಂ. 880, ಮಂಗಳೂರು ಘಟಕ ಇವರು ಬೆಳ್ಳಿಯ ಪದಕ ವಿಜೇತರಾಗಿರುತ್ತಾರೆ. ಇವರಿಗೆ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ರವರು ಅಭಿನಂದಿಸಿರುತ್ತಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post