ದಾವಣಗೆರೆ: ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗದ ವತಿಯಿಂದ ಹೆಡ್ ಕಾನ್ಸ್‌ಟೇಬಲ್ ಸಹಾಯಕ ವೈರ್‍ಲೆಸ್ ಅಪರೇಟರ್ (AWO)ಟೆಲಿ-ಪ್ರಿಂಟರ್ ಆಪರೇಟರ್ (TPO)} ಮತ್ತು ಕಾನ್ಸ್‌ಟೇಬಲ್ (ಚಾಲಕ-ಪುರುಷ) ದೆಹಲಿ ಪೊಲೀಸ್ ಪಡೆಯಲ್ಲಿ ಖಾಲಿಯಿರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಹುದ್ದೆಗಳಿಗೆ ಪಿ.ಯು.ಸಿ. ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.
ಈ ಸ್ಪರ್ಧಾತ್ಮಕ ಪರೀಕ್ಷೆಯು ಕಂಪ್ಯೂಟರ್ ಆಧಾರಿತವಾಗಿದ್ದು, ಆಸಕ್ತ ಅಭ್ಯರ್ಥಿಗಳು ಈ ವೆಬ್‍ಸೈಟ್ ಮೂಲಕ www.ssckkr.kar.nic.in & https://ssc.nic.in. ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಜು.29 ಕೊನೆಯ ದಿನವಾಗಿದೆ. ವಯೋಮಿತಿ ಹೆಡ್ ಕಾನ್ಸ್‌ಟೇಬಲ್ ಸಹಾಯಕ ವೈರ್‍ಲೆಸ್ ಅಪರೇಟರ್(AWO)ಟೆಲಿ-ಪ್ರಿಂಟರ್ ಆಪರೇಟರ್ (TPO) ಹುದ್ದೆಗಳಿಗೆ ವಯಸ್ಸು 18 ರಿಂದ 27 ವರ್ಷದೊಳಗಿರಬೇಕು. ಮತ್ತು ಕಾನ್ಸ್‌ಟೇಬಲ್ (ಚಾಲಕ-ಪುರುಷ) ಹುದ್ದೆಗಳಿಗೆ ವಯಸ್ಸು 21 ರಿಂದ 30 ವರ್ಷದೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ - 080-25502520/9483862020 ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ದಾವಣಗೆರೆ. ದೂ.ಸಂ:08192-259446ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
إرسال تعليق