ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ಒಬ್ಬರು ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆಯೊಂದು ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ನಡೆದಿದೆ.
ಮಾರತ್ ಹಳ್ಳಿ ಬಳಿಯ ವಂಶಿ ಸಿಟಾಡೆಲ್ ಅಪಾರ್ಟ್ ಮೆಂಟ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದ.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಂದ ವ್ಯಕ್ತಿಯನ್ನು ಕಂಡು ಸೆಕ್ಯೂರಿಟಿ ಗಾರ್ಡ್ ಶ್ಯಾಮನಾಥ್ ಆತನನ್ನು ಪ್ರಶ್ನೆ ಮಾಡಿದ್ದಾರೆ. ಎಷ್ಟೇ ಕೇಳಿದರೂ ವ್ಯಕ್ತಿ ಬಾಯಿಬಿಡದೇ ಸುಮ್ಮನಾಗಿದ್ದ. ಬಳಿಕ ಮನೆಯೊಳಗೆ ನುಗ್ಗಲು ಯತ್ನಿಸಿದ್ದ.
ಆತ ಕಳ್ಳನೆ ಇರಬೇಕು ಎಂದು ಭಾವಿಸಿ ಪಕ್ಕದಲ್ಲಿಯೇ ಇದ್ದ ರಾಡ್ ನಿಂದ ಸೆಕ್ಯೂರಿಟಿ ಗಾರ್ಡ್ ವ್ಯಕ್ತಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ.
ತಲೆಗೆ ಗಂಭೀರವಾಗಿ ಗಾಯವಾದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೊಲೆಯಾದ ವ್ಯಕ್ತಿ ಛತ್ತೀಸ್ ಗಢ ಮೂಲದವನು. ಟ್ರೈನಿಂಗ್ ಪಡೆಯಲು ಬೆಂಗಳೂರಿಗೆ ಬಂದಿದ್ದ ಎನ್ನಲಾಗಿದೆ.
إرسال تعليق