ಮಧ್ಯಪ್ರದೇಶ: ಸ್ನಾನ ಮಾಡುತ್ತಿದ್ದ ವೇಳೆ 10 ವರ್ಷದ ಬಾಲಕನನ್ನು ದೊಡ್ಡದಾದ ಮೊಸಳೆಯೊಂದು ನುಂಗಿದ ಘಟನೆಯೊಂದು ಮಧ್ಯಪ್ರದೇಶದ ಚಂಬಲ್ ನದಿಯಲ್ಲಿ ನಡೆದಿದೆ.
ಸೋಮವಾರ ಬಾಲಕ ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಮೊಸಳೆ ಬಾಲಕನನ್ನು ಪೂರ್ತಿಯಾಗಿ ನುಂಗಿದೆ.
ಕೂಡಲೇ ಸ್ಥಳೀಯರು ಮೊಸಳೆಯನ್ನು ಹಿಡಿದು ಬಾಲಕನ ರಕ್ಷಣೆಗೆ ಮುಂದಾಗಿದ್ದಾರೆ.
ನದಿಯಲ್ಲಿದ್ದ ಮೊಸಳೆಯನ್ನು ಕಷ್ಟಪಟ್ಟು ಹಿಡಿದು ಹೊರಗೆಳೆದ ಸ್ಥಳೀಯರು ಮೊಸಳೆಯನ್ನು ಕೊಂದು ಹೊಟ್ಟೆಯಲ್ಲಿರುವ ಬಾಲಕನನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಸರಕಾರಿ ಅಧಿಕಾರಿಗಳ ತಂಡ ಸ್ಥಳಕ್ಕೆ ಆಗಮಿಸಿದ್ದು, ಮೊಸಳೆಯನ್ನು ಕೊಲ್ಲದಂತೆ ಮನವಿ ಮಾಡಿದ್ದಾರೆ.
ಆದರೆ ಸ್ಥಳೀಯರು ಮೊಸಳೆ ಹೊಟ್ಟೆಯಲ್ಲಿ ಬಾಲಕ ಇನ್ನೂ ಜೀವಂತವಾಗಿದ್ದು, ಆತನನ್ನು ರಕ್ಷಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ ಬಾಲಕನನ್ನು ರಕ್ಷಿಸಿಕೊಂಡ ನಂತರವೇ ಮೊಸಳೆಯನ್ನು ಹೊರಗೆ ಬಿಡುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ವನ್ಯ ಜೀವಿ ಅಧಿಕಾರಿಗಳ ನಡುವೆ ವಾಗ್ವಾದ ಸಂಜೆಯಾದರೂ ಮುಗಿದಿಲ್ಲ. ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಹೇಳಲಾಗಿದೆ.
ನಂತರ ಮಧ್ಯಪ್ರವೇಶಿಸಿದ ಪೊಲೀಸರು ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ನಂತರ ಸ್ಥಳೀಯರು ಮೊಸಳೆಯನ್ನು ಬಿಟ್ಟಿದ್ದಾರೆ.
إرسال تعليق