ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವ ಚಿಂತನೆ: ಇಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು?

ಯುವ ಚಿಂತನೆ: ಇಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು?


ತಪ್ಪು ಮಾಡುವುದು ಸಹಜ ಅದನ್ನು ತಿದ್ದಿ ನಡೆಯೋನು ಮನುಜ ಎಂಬ ಗಾದೆಯಂತೆ ಯಾವ ಮಗು ಹುಟ್ಟಿದ ತಕ್ಷಣ ಎದ್ದು ನಡೆಯುವುದಕ್ಕೆ ಶುರು ಮಾಡುವುದಿಲ್ಲ. ನಡೆಯಲು ಮೊದಲು ಕಲಿಯುವಾಗ ಬಿದ್ದು ಎದ್ದು ಎಡವಲು ಶುರುಮಾಡುತ್ತವೆ. ಹಾಗೆಯೇ ಆ ಮಗು ಬೆಳೆದಾಗ ಎಲ್ಲೋ ಒಂದು ಕಡೆಯಲ್ಲಿ ದಾರಿತಪ್ಪಿ ಹೋಗುವುದನ್ನು ಗಮನಿಸಿರಬಹುದು. ಯಾತಕ್ಕೆ ಈ ಸಮಸ್ಯೆಗಳು ಎದುರಾಗುತ್ತದೆ, ತಂದೆ ತಾಯಿ ಕಲಿಸಿಕೊಟ್ಟ ಸಂಸ್ಕಾರ ಬೆಳೆಸಿದ ರೀತಿಯಲ್ಲಿ ಏನಾದರೂ ಕೊರತೆಯಿದೆ, ತಂದೆತಾಯಿಗಳು ತಮ್ಮ ಮಕ್ಕಳನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಎಡವಿದರೆ, ಮಕ್ಕಳ ಮನಸ್ಸಿನಲ್ಲಿ ಮೂಡುವ ಹಲವಾರು ಪ್ರಶ್ನೆ ಸಮಸ್ಯೆಗಳಿಗೆ ಬೆಂಬಲ ನೀಡುತ್ತಿಲ್ಲವೆ ಅಥವಾ ತಮ್ಮ ಮಕ್ಕಳಿಗೆ ತಂದೆ-ತಾಯಿ ನೀಡಿದ ಸ್ವಾತಂತ್ರ್ಯ ಹೆಚ್ಚಾಗಿದೆ ಮಕ್ಕಳು ಹೋಯಿತೇ? ಹೀಗೆ ಹತ್ತು ಹಲವು ಪ್ರಶ್ನೆಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುವುದು ಸಹಜ.


ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಮಕ್ಕಳು ಕೂಡ ಯಾವುದೇ ಸಮಸ್ಯೆಗಳಿಗೆ ಖಿನ್ನತೆಗಳಿಗೆ ಒಳಗಾಗಿ ತಮ್ಮ ನಿರ್ಧಾರವೇ ಸರಿ ಅನ್ನುವ ಹಾಗೆ ನಡೆದುಕೊಳ್ಳುತ್ತಾರೆ. ತಮಗೆ ಇಷ್ಟ ಬಂದ ರೀತಿಯಲ್ಲಿ ಶೋಕಿ ಮಾಡತೊಡಗುತ್ತಾರೆ. ಮಕ್ಕಳು ಬೆಳೆಯುವ ಹಂತದಲ್ಲಿ ಹಿರಿಯರ ಮಾತುಗಳನ್ನು ಕೇಳಲು ಸಿದ್ಧರಾಗುವುದಿಲ್ಲ. ಇಷ್ಟೆಲ್ಲಾ ವಿಷಯಗಳು ಒಂದು ಕಡೆಯಾದರೆ ಮತ್ತೊಂದು ಕಡೆ...


ಈಗಿನ ಆಡಳಿತ ವ್ಯವಸ್ಥೆಯಲ್ಲಿ ಅಪರಾಧಿಗೆ ತಕ್ಕುದಾದ ಶಿಕ್ಷೆ ವಿಧಿಸುವುದೇ? 

ಹಲವಾರು ವಿಷಯಗಳಲ್ಲಿ ಅಪರಾಧ ಮಾಡಿ ಅಪರಾಧಿ ಸಿಕ್ಕಿಬಿದ್ದಲ್ಲಿ ಆ ವ್ಯಕ್ತಿಗೆ ಸಹಕರಿಸುವುದಕ್ಕೆ ಹಲವು ಕೈಗಳು ಕೈಜೋಡಿಸುತ್ತೇವೆ. ಬುದ್ಧಿಜೀವಿಗಳು ಇಂತಹ ಹಲವಾರು ಕೆಲಸಗಳಲ್ಲಿ ತೊಡಗಿಕೊಳುತ್ತಾರೆ. ಅಪರಾಧಿ ತಪ್ಪಿತಸ್ಥನೆಂದು ತಿಳಿದರು ಆ ವ್ಯಕ್ತಿಗೆ ಸಹಾಯ ಮಾಡುವುದು ಸರಿಯೇ? ಆತ ಎಷ್ಟೇ ದೊಡ್ಡ ತಪ್ಪು ಮಾಡಿದರೂ ನಿರಪರಾಧಿ ಯಂತೆ ಸುಮ್ಮನೆ ಶಿಕ್ಷೆ ವಿಧಿಸದೆ ಬಿಟ್ಟುಬಿಡುವುದು ಎಷ್ಟು ಸರಿ ಹೇಳಿ? ಕಾನೂನಿನ ಸರಿಯಾದ ಬಳಕೆ ಯಾಕೆ ಇನ್ನೂ ಆಗುತ್ತಿಲ್ಲ. ನಿರಪರಾಧಿಗಳು ಬಡವರಾಗಿದ್ದರು ಅವರ ಪರಿಸ್ಥಿತಿಯನ್ನು ಯಾರು ಬಲ್ಲವರು, ಅವರ ಮನಸ್ಸಿನ ನೋವನ್ನು ಯಾರು ತಿಳಿಯುವರು, ಶ್ರೀಮಂತ ವ್ಯಕ್ತಿಗಳು ಆದರೆ  ಏನಾದರೂ ಅಂಥಹ ಘಟನೆಗಳು ಆದರೆ ಅದಕ್ಕೆ ಬೇಕಾದ ಮಾರ್ಗಗಳನ್ನು ತಾವೇ ಕಂಡುಕೊಳ್ಳುತ್ತಾರೆ. ಆದರೆ ಬಡವರಿಗೆ ಅದರ ಜ್ಞಾನ ಇರುವುದಿಲ್ಲ. ಬಡವರನ್ನು ಮೋಸ ಮಾಡಿ ಮೋಡಿಮಾಡುವ ಸಮಾಜವಿದು. ಅನೇಕ ಬಡವರಿಗೆ ವಿದ್ಯಾಭ್ಯಾಸವು ಇರುವುದಿಲ್ಲ ಅಂತಹವರನ್ನು ಕೂಡ ಕರುಣೆ ಇಲ್ಲದೆ ಮೋಸ ಮಾಡುತ್ತಾರೆ. ಬಡವರು ಎಷ್ಟೆಲ್ಲ ಮೋಸ, ವಂಚನೆ, ಅವಮಾನ, ಅಪಮಾನಗಳಿಗೆ ಎದುರಾಗುತ್ತಾರೆ ಅಲ್ಲವೇ? ಇಂತಹ ಅನೇಕ ಘಟನೆಗಳು ನಮ್ಮ ಸುತ್ತಮುತ್ತ ಪ್ರತಿದಿನ ನಡೆಯುತ್ತಿದ್ದರೂ ನಾವು ಮೂಕಪ್ರೇಕ್ಷಕರಾಗಿ ಕುಳಿತಿರುವೆವಲ್ಲ ಯಾತಕ್ಕಾಗಿ ನಾವೆಲ್ಲ ಇಂತಹ ತಪ್ಪು ನಡೆದಿದೆ ಧ್ವನಿ ಎತ್ತುವ ಪ್ರಯತ್ನ ಮಾಡಬಾರದು? ಯಾರಿಗಾಗಿ ಹೆದರಿ ಬಾಲ ಮುದುರಿಕೊಂಡು ಕುಳಿತಿರು ವೆವು ಎಂದು ತಿಳಿಯದು.


ಯುವಕರೇ ಮೂರ್ಖರಾಗಬೇಡಿ:

ಏನೋ ಒಂದು ಸಮಸ್ಯೆ ಬಂದಾಗ ಅದನ್ನು ಸರಿಪಡಿಸುವುದಕ್ಕೆ ದಾರಿ ಕಂಡುಹಿಡಿಯಿರಿ. ಭಗವಂತ ಯಾವ ಸಮಸ್ಯೆಗೂ ಪರಿಹಾರ ಸಿಗದಂತಹ ಸಮಸ್ಯೆಗಳನ್ನು ಹುಟ್ಟುಹಾಕುವುದಿಲ್ಲವಂತೆ. ಪ್ರತಿಯೊಂದು ಸಮಸ್ಯೆಗೂ ಒಂದಲ್ಲ ಒಂದು ರೀತಿಯ ಪರಿಹಾರವಿರುತ್ತದೆ. ಆ ಪರಿಹಾರವನ್ನು ಹುಡುಕುವ ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು.ತನ್ನಿಂದ ತಪ್ಪಾಗಿ ಹೋಯಿತು ಎಂದು ಕೊರಗಿ ಯಾವುದೇ ಕೆಟ್ಟ ನಿರ್ಧಾರವನ್ನು ತಕ್ಷಣ ತೆಗೆದುಕೊಳ್ಳಬಾರದು. ಅಂತಹ ಸಮಯದಲ್ಲಿ ಮನಸ್ಸಿಗೆ ಹಲವಾರು ವಿಚಾರಗಳು ಹೊಳೆಯುತ್ತವೆ ಸಹಜ ಆದರೆ ಮನಬಂದಂತೆ ನಡೆದುಕೊಳ್ಳಬೇಡಿ. ಅನೇಕ ಪತ್ರಿಕೆಗಳಲ್ಲಿ ಇತರೆ ಜಾಲತಾಣಗಳಲ್ಲಿ ಇತ್ತೀಚೆಗೆ ಹಲವಾರು ವಾರ್ತೆಗಳು, ವಿಷಯಗಳು ಬರುವುದನ್ನು ಕೇಳಿರಬಹುದು, ನೋಡಿರಬಹುದು. ಹಲವು ಮಕ್ಕಳು ತನ್ನಿಂದ ತಪ್ಪಾಯಿತೆಂದು ಹಿಂದೂ ಮುಂದು ಯೋಚಿಸದೆ ಕ್ಷಣಾರ್ಧದಲ್ಲಿ ಸಾಯುವುದಕ್ಕೆ ಹತ್ತು ಹಲವು ಮಾರ್ಗಗಳನ್ನು ತಾವೇ ಕಂಡುಕೊಳ್ಳುತ್ತಾರೆ. ಅವರ ಬುದ್ಧಿಗೆ ತಿಳಿದಿರುವುದಿಲ್ಲ ತಾವು ಇಂತಹ ನಿರ್ಧಾರವನ್ನು ಮಾಡುವುದರಿಂದ ನಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ತಂದೆ ತಾಯಿ ಯ ಪರಿಸ್ಥಿತಿ ಏನಾಗಬಹುದು, ಅವರು ನಮ್ಮ ಬಗೆಗೆ ಹೊತ್ತ ಕನಸುಗಳು ನುಚ್ಚು ನೂರಾಗಿ ಹೋಗುತ್ತದೆ ಹೀಗೆ ಯಾವುದೇ ರೀತಿಯಲ್ಲೂ ಆಲೋಚನೆ ಮಾಡುವುದಕ್ಕೆ ಹೋಗೋದಿಲ್ಲ. ಬದಲಿಗೆ ಕೆಟ್ಟ ನಿರ್ಧಾರಗಳನ್ನು ಹುಡುಕುವ ಆಲೋಚನೆಯಲ್ಲಿ ಇರುತ್ತಾರೆ.


ಯುವಕರೇ ನೀವು ಯಾರು ಇಂತಹ ಕೆಟ್ಟ ಚಟಗಳಿಗೆ ಒಳಗಾಗಬೇಡಿ. ನಿಮ್ಮನ್ನು ನೀವು ಮೂರ್ಖರನ್ನಾಗಿಸಿ ಕೊಳ್ಳಬೇಡಿ. ಬದಲಿಗೆ ನಿಮಗಾದ ನೋವು ತೊಂದರೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳಿ. ನ್ಯಾಯಕ್ಕಾಗಿ ಹೋರಾಡಿ. ಅನ್ಯಾಯ, ಮೋಸ, ವಂಚನೆ ನಡೆದಲ್ಲಿ ಧೈರ್ಯದಿಂದ ಧ್ವನಿಯೆತ್ತಿ ನ್ಯಾಯಕ್ಕಾಗಿ ಹೋರಾಡಿ . ಎಲ್ಲಿ ತಪ್ಪು ನಡೆಯುತ್ತದೆ ಅಲ್ಲಿ ತಪ್ಪು ನಡೆಯದಂತೆ ನೋಡಿಕೊಳ್ಳಿ. ಇಂದು ನಾವೆಲ್ಲರೂ ನ್ಯಾಯದ ದಾರಿಯಲ್ಲಿ ಹೋದರೆ ಅನ್ಯಾಯದ ವಿನಾಶವಾಗುವುದು ಖಚಿತ. ಮುಂದಿನ ಪೀಳಿಗೆ ಯವರಾದರು ತಪ್ಪು ಯಾವುದು ?ಸರಿ ಯಾವುದು? ಯಾವುದು ನ್ಯಾಯ ?ಯಾವುದು ಅನ್ಯಾಯ? ಎಂಬುದನ್ನು ಅರಿತುಕೊಳ್ಳುವಂತೆ ಆಗಲಿ.


-ದೀಪ್ತಿ ಅಡ್ಡಂತ್ತಡ್ಕ

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಮಹಾವಿದ್ಯಾಲಯ ನೆಹರು ನಗರ ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


0 Comments

Post a Comment

Post a Comment (0)

Previous Post Next Post