ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮನೆ ಮನೆಗಳಲ್ಲಿ ಯೋಗ ಬೆಳಗಲಿ: ದೇಲಂಪಾಡಿ

ಮನೆ ಮನೆಗಳಲ್ಲಿ ಯೋಗ ಬೆಳಗಲಿ: ದೇಲಂಪಾಡಿ


ಮಂಗಳೂರು: "ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21" ಇದರ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕರಿಗೆ ಪೂರ್ವಭಾವಿ ಯೋಗ ತರಬೇತಿ ಶಿಬಿರ ದಿನಾಂಕ 19-06-2022 ರಂದು ಸರ್ಕಾರಿ ಕಾಲೇಜು ಹಂಪನಕಟ್ಟೆ ಮಂಗಳೂರು, ಮಂಗಳೂರು ಇಲ್ಲಿ ನಡೆಯಿತು.


ಖ್ಯಾತ ಯೋಗ ಗುರು ಗೋಪಾಲಕೃಷ್ಣ ದೇಲಂಪಾಡಿ ಮತ್ತು ಯೋಗ ಶಿಕ್ಷಕಿ ಸುಮಾ ಇವರ ಮಾರ್ಗದರ್ಶನದಲ್ಲಿ ಈ ತರಬೇತಿ ಶಿಬಿರ ನಡೆಯಿತು. ಯೋಗ ಮನುಷ್ಯನ ಆರೋಗ್ಯಕ್ಕೆ ಅತೀ ಅವಶ್ಯಕ. ದೈಹಿಕ ಅರೋಗ್ಯ ಮತ್ತು ಮಾನಸಿಕ ನೆಮ್ಮದಿಗೆ ಯೋಗವನ್ನು ಪ್ರತಿಯೊಬ್ಬರು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಗೋಪಾಲಕೃಷ್ಣ ದೇಲಂಪಾಡಿ ಅವರು ಕರೆ ನೀಡಿದರು.


ದಿನದ 8 ಗಂಟೆಗಳ ಕಾಲ ನಿಂತುಕೊಂಡು ಒತ್ತಡದ ಕೆಲಸ ಮಾಡುವ ಗೃಹರಕ್ಷಕರಿಗೆ ಯೋಗ ಅತ್ಯಂತ ಅನಿವಾರ್ಯ ಎಂದು ಅವರು ನುಡಿದರು. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್  ಚೂಂತಾರು ಇವರು ನೇತೃತ್ವದಲ್ಲಿ ಈ ಶಿಬಿರ ನಡೆಯಿತು. ಸುಮಾರು 25 ಮಂದಿ ಗೃಹರಕ್ಷಕರು ಈ ಶಿಬಿರದಲ್ಲಿ ಭಾಗವಹಿಸಿದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post