ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ಚೂಂತಾರು

ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ಚೂಂತಾರು


ಮಂಗಳೂರು: ಪರಿಸರದ ರಕ್ಷಣೆ ಮತ್ತು ಮರಗಿಡಗಳನ್ನು ನೆಟ್ಟು ಬೆಳೆಸುವುದು ಕೇವಲ ಸರಕಾರದ ಅಥವಾ ಅರಣ್ಯ ಇಲಾಖೆಯ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರೀಕನೂ ಈ ಸಾಮಾಜಿಕ ಹೊಣೆಗಾರಿಕೆ ಅರಿತು ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ರಕ್ಷಣೆಗೆ ಮುಂದಾಗಬೇಕು. ಹೆಚ್ಚುತ್ತಿರುವ ಪರಿಸರದ ತಾಪಮಾನ ನಿಯಂತ್ರಿಸಿ ಕೈಗಾರೀಕರಣದಿಂದ ಉಂಟಾಗುವ ಜಲ, ನೆಲದ ಮಾಲಿನ್ಯವನ್ನು ಮತ್ತು ಬರಿದಾಗುತ್ತಿರುವ ಭೂಮಿಯೊಳಗಿನ ಸಂಪತ್ತುಗಳನ್ನು ಉಳಿಸಲು ಎಲ್ಲರೂ ಭಾಗಿಗಳಾಗಬೇಕು. ಎಲ್ಲರ ಪಾಲುದಾರಿಕೆಯಿಂದ ಮಾತ್ರ ಸರಕಾರದ ಎಲ್ಲಾ ಯೋಜನೆಗಳು ಫಲಪ್ರದವಾಗಬಹುದು. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು, ಜನರು ಮತ್ತು ಸರಕಾರ ಒಟ್ಟು ಸೇರಿ ಕಾಡು ಬೆಳೆಸಿ, ನಾಡು ಉಳಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕಾಗಿದೆ. ಇಲ್ಲವಾದಲ್ಲಿ ಫಲವತ್ತಾದ ಭೂಮಿ ಬರಡಾಗಿ ಬಂಜರು ಭೂಮಿಯಾಗುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ. ಫಲವತ್ತಾದ ಕಾಡು ಕಡಿದು ಕಾಂಕ್ರೀಟ್ ನಾಡು ಮಾಡಿದಲ್ಲಿ ಮುಂದಿನ ಪೀಳಿಗೆಗೆ ಉಸಿರಾಡಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.


ವಿಶ್ವ ಪರಿಸರ ದಿನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ ಆವರಣದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ಉಳಿಸುವ ಅಭಿಯಾನಕ್ಕೆ ಅವರು ಚಾಲನೆ ನೀಡಿದರು.


ಪ್ರತಿ ಗೃಹರಕ್ಷಕರಿಗೆ ಒಂದು ಗಿಡದಂತೆ ಈ ಮಳೆಗಾಲ 1000 ಗಿಡನೆಡುವ ವಿಶೇಷ ಅಭಿಯಾನ ಗೃಹರಕ್ಷಕ ಇಲಾಖೆ ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಉಪಸಮಾದೇಷ್ಟ ರಮೇಶ್, ಕಛೇರಿ ಅಧೀಕ್ಷರಾದ ರತ್ನಾಕರ, ಪ್ರಥಮ ದರ್ಜಿ ಸಹಾಯಕಿ ಅನಿತಾ ಟಿ.ಎಸ್, ಗೃಹರಕ್ಷಕರಾದ ದಿವಾಕರ್, ಸುಲೋಚನ, ಜಯಲಕ್ಷ್ಮಿ, ಪ್ರದೀಪ್, ರಾಘವೇಂದ್ರ, ವಿನಯ್ ಮುಂತಾದವರು ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 تعليقات

إرسال تعليق

Post a Comment (0)

أحدث أقدم