ಮಂಗಳೂರು: ಸುಬ್ರಹ್ಮಣ್ಯ - ಗುಂಡ್ಯ ರಸ್ತೆಯಲ್ಲಿ ಇಂದು ಚಲಿಸುತ್ತಿದ್ದ ಕೆಎಸ್ಸಾರ್ಟಸಿ ಬಸ್ಸಿನ ಮೇಲೆ ಭಾರಿ ಗಾತ್ರದ ಮರವೊಂದು ಮುರಿದು ಬಿದ್ದ ಘಟನೆ ನಡೆದಿದೆ. ಬಸ್ಸು ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳುತ್ತಿತ್ತು. ಅದೃಷ್ಟವಶಾತ್ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಸ್ಸಿನ ಮೇಲ್ಭಾಗ ಜಖಂಗೊಂಡಿದ್ದು, ಗಾಜುಗಳು ಒಡೆದಿವೆ.
ಕರಾವಳಿಯಾದ್ಯಂತ ಮಳೆಗಾಲ ಶುರುವಾಗಿದ್ದು, ಹಲವೆಡೆ ಮಳೆ ಜೋರಾಗಿದೆ. ಮಳೆ ಸಂಬಂಧಿತ ಅನಾಹುತಗಳೂ ಅಲ್ಲಲ್ಲಿ ವರದಿಯಾಗುತ್ತಿವೆ.
ಸುಬ್ರಹ್ಮಣ್ಯ- ಧರ್ಮಸ್ಥಳ ರಸ್ತೆಯ ಪೆರಿಯಶಾಂತಿ ಎಂಬಲ್ಲಿ ಚಲಿಸುತ್ತಿದ್ದ ಟೆಂಪೋ ಟ್ರಾವಲರ್ ಮೇಲೆ ಇದೇ ರೀತಿ ಮರವೊಂದು ಮುರಿದು ಬಿದ್ದು ವಾಹನ ಜಖಂಗೊಂಡಿದೆ. ಪ್ರಾಯಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಕಾಡಿನ ನಡುವೆ ಹಾದುಹೋಗುವ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಮಳೆಗಾಲದಲ್ಲಿ ವಿಶೇಷ ಮುನ್ನೆಚ್ಚರಿಕೆ ವಹಿಸಬೇಕಾಗಿದೆ. ರಸ್ತೆಗೆ ತಾಗಿಕೊಂಡಂತೆ ಇರುವ ಮುರಿದು ಬೀಳಬಹುದಾದ ಮರಗಳನ್ನು ತೆರವುಗೊಳಿಸುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment