ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚುಚ್ಚುಮದ್ದು ಪಡೆದ 14 ಮಕ್ಕಳಿಗೆ ಅಡ್ಡ ಪರಿಣಾಮ; ಆಸ್ಪತ್ರೆ ದಾಖಲು

ಚುಚ್ಚುಮದ್ದು ಪಡೆದ 14 ಮಕ್ಕಳಿಗೆ ಅಡ್ಡ ಪರಿಣಾಮ; ಆಸ್ಪತ್ರೆ ದಾಖಲು

 


ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಚುಚ್ಚುಮದ್ದು ನಿಂದ 14 ಮಕ್ಕಳಿಗೆ ಅಡ್ಡ ಪರಿಣಾಮ ಬೀರಿದ ಘಟನೆಯೊಂದು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ನಡೆದಿದೆ.


ನಿನ್ನೆ ಸಂಜೆ ಮಕ್ಕಳಿಗೆ ಆಂಟಿಬಯಾಟಿಕ್ ಇಂಜೆಕ್ಷನ್ ನೀಡಲಾಗಿತ್ತು. ನಿನ್ನೆ ತಡರಾತ್ರಿ ಏಕಾಎಕಿ ಅಡ್ಡ ಪರಿಣಾಮ ಉಂಟಾಗಿದ್ದು, ನಾಲ್ಕು ಮಕ್ಕಳಿಗೆ ತೀವ್ರ ಜ್ವರ ಹಾಗೂ ಇನ್ನೂ ನಾಲ್ಕು ಮಕ್ಕಳ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು.


ಒಟ್ಟು 14 ಮಕ್ಕಳನ್ನು ಕೂಡಲೇ ಮೆಗ್ಗಾನ್ ಸೇರಿದಂತೆ ನಗರದ ವಿವಿಧ​ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆ, ಶಿವಮೊಗ್ಗದ ಮೆಗ್ಗಾನ್ ಹಾಗೂ ಸರ್ಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. 


ಅಡ್ಡಪರಿಣಾಮ ಉಂಟಾದ ಚುಚ್ಚುಮದ್ದನ್ನು ಲ್ಯಾಬ್​ಗೆ ಕಳುಹಿಸಲು ಆರೋಗ್ಯಾಧಿಕಾರಿಗಳು ನಿರ್ಧರಿಸಿದ್ದಾರೆ.



0 Comments

Post a Comment

Post a Comment (0)

Previous Post Next Post