ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕುಡಿದ ಮತ್ತಲ್ಲಿ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಸ್ನೇಹಿತನ ಕೊಲೆ

ಕುಡಿದ ಮತ್ತಲ್ಲಿ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಸ್ನೇಹಿತನ ಕೊಲೆ

 


ಬೆಂಗಳೂರು: ಕುಡಿದ ಮತ್ತಲ್ಲಿ 10ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಸ್ನೇಹಿತನನ್ನು ಕೊಲೆ ಮಾಡಿದ ಘಟನೆಯೊಂದು ಬಿ.ಕೆ.ಹಳ್ಳಿಯ ಮಹಾದೇವ ಕೊಡಿಗೆಹಳ್ಳಿಯಲ್ಲಿ ನಡೆದಿದೆ.


ನಾರಾಯಣಸ್ವಾಮಿ (35) ಕೊಲೆಯಾದ ವ್ಯಕ್ತಿ.

ಚಂದ್ರ ಕುಡಿದ ಮತ್ತಲ್ಲಿ ಸ್ನೇಹಿತನನ್ನು ಕೊಂದು ಜೈಲು ಸೇರಿದ ವ್ಯಕ್ತಿ. ಮೇ 26ರಂದು ಈ ಘಟನೆ ನಡೆದಿದ್ದು, ಘಟನೆ ಬಗ್ಗೆ ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಚಂದ್ರ ಮತ್ತು ನಾರಾಯಣಸ್ವಾಮಿ ಇಬ್ಬರು ಸ್ನೇಹಿತರಾಗಿದ್ದು, ಗಾರೆ‌ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ನಾರಾಯಣಸ್ವಾಮಿ ಕುಡಿದು ಗಲಾಟೆ ಮಾಡಿ, 6 ತಿಂಗಳ ಹಿಂದೆ ಪತ್ನಿಯನ್ನು ಓಡಿಸಿದ್ದನು.


26ರಂದು ಚಂದ್ರ ಜೊತೆ ಸೇರಿ ಹಗಲು ಹೊತ್ತಲ್ಲೇ ತಮ್ಮ ಮನೆಯಲ್ಲಿ ಮದ್ಯಪಾನ ಸೇವನೆ ಮಾಡುತ್ತಿದ್ದ.

ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ನಂತರ ಚಂದ್ರ ಮನೆಯಲ್ಲಿದ್ದ ಚಾಕು ತಂದು ಹತ್ತಾರು 10ಕ್ಕೂ ಹೆಚ್ಚು ಬಾರಿ ಚುಚ್ಚಿ ಸ್ನೇಹಿತ ನಾರಾಯಣಸ್ವಾಮಿಯನ್ನು ಕೊಲೆ ಮಾಡಿದ್ದಾನೆ.ಆತ  ಮೃತದೇಹವನ್ನು ಮನೆಯಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.


ಪಕ್ಕದ ಮನೆಯ ಮಗು ಆಟವಾಡುತ್ತಾ ಬಂದು ಮೃತದೇಹ ನೋಡಿದೆ.ಆ ಬಳಿಕ ಮನೆಯವರಿಗೆ ವಿಷಯ ತಿಳಿಸಿದೆ.

ಸ್ನೇಹಿತರಾಗಿದ್ದ ಇಬ್ಬರ ಮಧ್ಯೆ ನಾಲ್ಕು ವರ್ಷದ ಹಿಂದೆ ಜಗಳ ನಡೆದಿತ್ತು. ಘಟನೆ ಬಗ್ಗೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಮತ್ತೆ ಇಬ್ಬರು ಒಂದಾಗಿದ್ದರು.

ಈಗ ಒಟ್ಟಿಗೆ ಕುಡಿಯುತ್ತಾ ಮತ್ತೆ ಜಗಳ ಶುರುವಾಗಿ ಕೊಲೆಯಲ್ಲಿ ಕೊನೆಯಾಯಿತು.

0 Comments

Post a Comment

Post a Comment (0)

Previous Post Next Post