ನಿಡ್ಡೋಡಿ: ಈಶಾ ಫೌಂಡೇಷನ್ ನ ಸದ್ಗುರು ಅವರು ಜಗತ್ತಿನಾದ್ಯಂತ "ಮಣ್ಣು ಉಳಿಸಿ" #SaveSoil ಅಭಿಯಾನವನ್ನು ಜ್ಞಾನರತ್ನ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್‌ನ ಶ್ರೀ ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ ನಿಡ್ಡೋಡಿಯಲ್ಲಿ ಆಚರಿಸಲಾಯಿತು.
ಅಭಿಯಾನದ ಮುಖಾಂತರ ವಿದ್ಯಾರ್ಥಿಗಳಿಗೆ ನಮ್ಮ ನೆಲದ ಮಣ್ಣಿನ ಮಹತ್ವ ಹಾಗೂ ಮಣ್ಣಿನ ರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರಗಳನ್ನು ವಿವರಿಸಲಾಯಿತು.
ಅಭಿಯಾನದಲ್ಲಿ ಜ್ಞಾನರತ್ನ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾದ ಶ್ರೀ ಭಾಸ್ಕರ ದೇವಸ್ಯ, ಸಂಸ್ಥೆಯ ಅಡಳಿತಾಧಿಕಾರಿ ಶ್ರೀ ಕೆ ರಾಘವೇಂದ್ರ ಭಟ್, ಈಶಾ ಫೌಂಡೇಷನ್ ನ ಸ್ವಯಂಸೇವಕರಾದ ಶ್ರೀ ಸಂದೀಪ್ ಕುಮಾರ್, ಆಕಾಶ್ ಶೆಟ್ಟಿ, ಸ್ವಾತಿ, ಸುಪ್ರೀತ್ ವಿ., ಅಜಲಶ್ರೀ ಭಾಗವಹಿಸಿದ್ದರು.
ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಅನುರಾಧ ಸಾಲ್ಯಾನ್, ಶ್ರೀಮತಿ ದಿವ್ಯಾ ಎಸ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸುಮಾರು 350 ವಿದ್ಯಾರ್ಥಿಗಳು ಮಣ್ಣನ್ನು ಉಳಿಸುವ ಸಂಕಲ್ಪ ಸ್ವೀಕರಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق