ಬೆಂಗಳೂರು: ಸ್ಯಾಂಡಲ್ವುಡ್ ಯುವ ನಟನನ್ನು ಚಾಕುನಿಂದ ಇರಿದು ಕೊಲೆ ಮಾಡಿದ ಘಟನೆಯೊಂದು ಬೆಂಗಳೂರಿನ ಆರ್.ಆರ್ ನಗರ ಠಾಣಾ ವ್ಯಾಪ್ತಿಯ ಪಟ್ಟಣಗೆರೆಯಲ್ಲಿ ನಡೆದಿದೆ.
ಸತೀಶ್ ವಜ್ರ ಕೊಲೆಯಾದ ದುರ್ದೈವಿಯಾಗಿದ್ದು, ಮನೆಯಲ್ಲೇ ಚಾಕುವಿನಿಂದ ಇರಿದು ಸತೀಶ್ ಹತ್ಯೆ ಮಾಡಲಾಗಿದೆ.
ಸತೀಶ್ ಕನ್ನಡ ಲಗೋರಿ ಎಂಬ ಸಿನಿಮಾದಲ್ಲಿ ನಟಿಸಿದ್ದರು. ಘಟನಾ ಸ್ಥಳಕ್ಕೆ ಆರ್.ಆರ್.ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರ್ ಮೂಲದ ಸತೀಶ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮೂರು ತಿಂಗಳ ಹಿಂದೆಯಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು ಎನ್ನಲಾಗಿದೆ.
ಇಂದು ಸತೀಶ್ರನ್ನು ಇರಿದು ಕೊಲೆ ಮಾಡಿದ್ದು, ಪತ್ನಿ ಆತ್ಮಹತ್ಯೆಗೆ ಸತೀಶ್ ಕಾರಣ ಎಂದು ಭಾಮೈದುನನೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
إرسال تعليق