ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕಬಳ್ಳಾಪುರ-ಬೆಂಗಳೂರು ನಡುವಿನ ರೈಲು ಪ್ರಯಾಣ ದರ ಏರಿಕೆ

ಚಿಕ್ಕಬಳ್ಳಾಪುರ-ಬೆಂಗಳೂರು ನಡುವಿನ ರೈಲು ಪ್ರಯಾಣ ದರ ಏರಿಕೆ

 


ಚಿಕ್ಕಬಳ್ಳಾಪುರ : ರೈಲು ಪ್ರಯಾಣಿಕರಿಗೆ ಬಿಗ್ ಶಾಕ್ ಚಿಕ್ಕಬಳ್ಳಾಪುರ- ಬೆಂಗಳೂರು ನಡುವಿನ ಪ್ರಯಾಣ ದರವನ್ನು 40 ರೂ.ಗೆ ಏರಿಸಲಾಗಿದೆ.


ಚಿಕ್ಕಬಳ್ಳಾಪುರ-ಬೆಂಗಳೂರು ನಡುವಿನ ಮಾರ್ಗದಲ್ಲಿ ಈ ಮೊದಲು ಪ್ಯಾಸೆಂಜರ್ ರೈಲು ಸಂಚರಿಸುತ್ತಿತ್ತು.


ಆಗ ದರ 15 ರೂ. ನಿಗದಿಯಾಗಿತ್ತು. ಈಗ ಡೆಮು ಎಕ್ಸ್ ಪ್ರೆಸ್ ರೈಲು ಸಂಚರಿಸುತ್ತಿದೆ. ಡೆಮು ಎಕ್ಸ್ ಪ್ರೆಸ್ ರೈಲಿನ ದರ 40 ರೂ.ಗೆ ಏರಿಕೆ ಮಾಡಲಾಗಿದೆ.


ಹೊಸ ದರದ ಪ್ರಕಾರ ಚಿಕ್ಕಬಳ್ಳಾಪುರದಿಂದ ಯಲಹಂಕ ನಡುವಿನ ಯಾವುದೇ ನಿಲ್ದಾಣದಲ್ಲಿ ಇಳಿಯುವುದಾದರೂ 30 ರೂ. ಶುಲ್ಕ ಪಾವತಿಸಬೇಕು. ಯಲಹಂಕದಿಂದ ಯಶವಂತಪುರದ ನಡುವಿನ ನಿಲ್ದಾಣಗಳಿಗೆ 35 ರೂ. ಹಾಗೂ ಕೆಎಸ್ ಆರ್ ನಿಲ್ದಾಣಕ್ಕೆ 40 ರೂ. ದರ ನಿಗದಿಪಡಿಸಲಾಗಿದೆ.


0 تعليقات

إرسال تعليق

Post a Comment (0)

أحدث أقدم