ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮೈಸೂರು ಅರಮನೆಯಲ್ಲಿ ಉಪಾಹಾರ ಸೇವಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

ಮೈಸೂರು ಅರಮನೆಯಲ್ಲಿ ಉಪಾಹಾರ ಸೇವಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ

 


ಮೈಸೂರು: ಮೋದಿ ಅವರಿಗೆ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ಉಪಾಹಾರದ ವ್ಯವಸ್ಥೆ ಮಾಡಿದ್ದರು.

ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ಆಹ್ವಾನದ ಉಪಹಾರಕೂಟಕ್ಕೆ ಆಗಮಿಸಿದ ಮೋದಿ ಅವರಿಗೆ ದಕ್ಷಿಣ ಭಾರತ ಶೈಲಿಯ ಉಪಹಾರ ತಿಂಡಿಗಳನ್ನು ಬಳ್ಳಿ ತಟ್ಟೆಯಲ್ಲಿ ಬಡಿಸಲಾಯಿತು.

ಉಪಹಾರ ದಲ್ಲಿ ಸ್ಪೆಷಲ್​ ಮೈಸೂರು​ ಪಾಕ್​, ಇಡ್ಲಿ ಸಾಂಬರ್, ಅವಲಕ್ಕಿ, ಉಪ್ಪಿಟ್ಟು​ ಕೂಡ ಈ ಮೆನುವಿನಲ್ಲಿತ್ತು.


ಅರಮನೆ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡು ಸತತ 45 ನಿಮಿಷ ಕಾಲ ಸಾವಿರಾರು ಯೋಗಪಟುಗಳ ಜತೆ ಯೋಗ ಪ್ರದರ್ಶನ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ನಂತರ ಡಿಜಿಟಲ್​ ಯೋಗ ಕೇಂದ್ರವನ್ನು ಉದ್ಘಾಟಿಸಿದರು.

ಬಳಿಕ ಅಂಬಾವಿಲಾಸ ಅರಮನೆಗೆ ತೆರಳಿದ ಮೋದಿ ಅವರು ರಾಜಮನೆತನದ ಆತಿಥ್ಯ ಸ್ವೀಕರಿಸಿದರು. ಪ್ರಧಾನಿಗಾಗಿ ಶುದ್ಧ ಸಸ್ಯಹಾರದ ಖಾದ್ಯಗಳನ್ನು ರಾಜಮಾತೆ ಪ್ರಮೋದಾ ದೇವಿ ಅವರ ನೇತೃತ್ವದಲ್ಲಿ ತಯಾರಿಸಲಾಗಿತ್ತು.


0 Comments

Post a Comment

Post a Comment (0)

Previous Post Next Post