ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸುಬೋಧ ಪ್ರೌಢಶಾಲೆ ಪಾಣಾಜೆ: ರಕ್ಷಕ ಶಿಕ್ಷಕ ಸಂಘದ ರಚನೆ

ಸುಬೋಧ ಪ್ರೌಢಶಾಲೆ ಪಾಣಾಜೆ: ರಕ್ಷಕ ಶಿಕ್ಷಕ ಸಂಘದ ರಚನೆ


ಪಾಣಾಜೆ: ಶೈಕ್ಷಣಿಕ ವರ್ಷ 2022-2023 ನೇ ಸಾಲಿಗೆ ಪಾಣಾಜೆ ಸುಬೋಧ ಪ್ರೌಢಶಾಲೆಯ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ದೇವಸ್ಯ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವಿಶ್ವನಾಥ ಮೂಲ್ಯ ಕೊಂದಲ್ಕಾನ, ಹಾಗೂ ಕಾರ್ಯದರ್ಶಿಯಾಗಿ ಮಮತಾ ಎನ್, ಗುರಿಕ್ಕೇಲು ಆಯ್ಕೆಯಾಗಿದ್ದಾರೆ.


ಇತ್ತೀಚೆಗೆ ಸುಬೋಧ ಪ್ರೌಢಶಾಲೆಯಲ್ಲಿ ನಡೆದ ಹೆತ್ತವರ/ ಪೋಷಕರ ಸಭೆಯಲ್ಲಿ ಈ ಆಯ್ಕೆಯನ್ನು ಮಾಡಲಾಯಿತು.


ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ವಸಂತಿ ಸೂರಂಬೈಲು, ಸದಸ್ಯರಾಗಿ ಶ್ರೀಮತಿ ಹೇಮಾವತಿ ಭರಣ್ಯ, ಅಬ್ದುಲ್ ರಹಿಮಾನ್ ಬೊಳ್ಳಿಂಬಳ, ನಾರಾಯಣ ನಾಯ್ಕ ಗುಡ್ಡೆ, ಜಯಶ್ರೀ ಸೂರಂಬೈಲು, ಖಾಲಿಬ್ ಪಾರ್ಪಳ, ಲಕ್ಷ್ಮೀನಾರಾಯಣ ಬೊಳ್ಳುಕಲ್ಲು, ಕೇಶವ ನಾಯ್ಕ ಮುಂಡಿತ್ತಡ್ಕ, ಮೈಮೂನಾ ಆರ್ಲಪದವು, ವಿಶ್ವನಾಥ ಕೊಂದಲ್ಕಾನ, ಸೀತಾ ಕಾಕೆಕೊಚ್ಚಿ ಹಾಗೂ ಸುಲೈಖಾ ಬೊಳ್ಳಿಂಬಳ ಆಯ್ಕೆಯಾಗಿದ್ದಾರೆ.


ಇದೇ ಸಂದರ್ಭದಲ್ಲಿ ಅಕ್ಷರ ದಾಸೋಹ ಯೋಜನೆಯ ಮೇಲುಸ್ತುವಾರಿಗಾಗಿ ತಾಯಿಯಂದಿರ ಸಮಿತಿ ಯನ್ನು ರಚಿಸಲಾಯಿತು. ಈ ಸಮಿತಿಗೆ ಶ್ರೀಮತಿ ಸುಂದರಿ, ಶ್ರೀಮತಿ ಶೋಭಾ ಸುಡ್ಕುಳಿ, ಸಮೀಮಾ ಪಡ್ಯಂಬೆಟ್ಟು, ಸುಜಾತಾ ಕೊಂದಲಡ್ಕ, ಲಲಿತಾ ಸೂರಂಬೈಲು, ಪುಷ್ಪಾ ಗುವೆಲುಗದ್ದೆ ಹಾಗೂ ಗೀತಾ ಭರಣ್ಯ ಇವರನ್ನು ಆಯ್ಕೆ ಮಾಡಲಾಯಿತು.


ಮಕ್ಕಳ ಹಿತರಕ್ಷಣಾ ಸಮಿತಿಗೆ ಕೃಷ್ಣ ನಾಯ್ಕ ಮಾಯಿಲಕಾನ, ಅಬ್ದುಲ್ ರಜಾಕ್ ಬೊಳ್ಳಿಂಬಳ, ಮಂಜುನಾಥ ಆಚಾರ್ಯ ಸ್ವರ್ಗ, ನಾರಾಯಣಗೌಡ ಸ್ವರ್ಗ, ರೇವತಿ ಪಡ್ಯಂಬೆಟ್ಟು, ಶಾಹಿನಾ ಬೊಳ್ಳಿಂಬಳ ಹಾಗೂ ಆನಂದ ಭರಣ್ಯ ಇವರನ್ನು ಆಯ್ಕೆ ಮಾಡಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم