ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪೆರ್ಲಂಪಾಡಿಯಲ್ಲಿ ಯುವಕನ ಮರ್ಡರ್ ; ಮೂವರು ಪೋಲಿಸ್ ವಶ

ಪೆರ್ಲಂಪಾಡಿಯಲ್ಲಿ ಯುವಕನ ಮರ್ಡರ್ ; ಮೂವರು ಪೋಲಿಸ್ ವಶ

 


ಪುತ್ತೂರು : ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಪುತ್ತೂರಿನ ಕೆಯ್ಯೂರು ಪಲ್ಲತ್ತಡ್ಕದಿಂದ ನರ್ಮೇಶ್ ರೈ(29), ನಿತಿಲ್ ಶೆಟ್ಟಿ(23), ವಿಜೇಶ್(22) ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಪ್ರಕರಣ ಕ್ಕೆ ಸಂಬಂಧಿಸಿ ಇತರ ಆರೋಪಿಗಳ ಪತ್ತೆಗೆ ಪೊಲೀಸರ ಶೋಧ ಕಾರ್ಯ ಮುಂದುವರೆಸಿದ್ದಾರೆ. ಇದೊಂದು ಹಿಂದಿನ ದ್ವೇಷದ ಹತ್ಯೆ ಪೊಲೀಸರು ಹೇಳಿದ್ದಾರೆ.


ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್‌ಐ ಉದಯ ರವಿ, ಬೆಳ್ಳಾರೆ ಠಾಣಾ ಪಿಎಸ್‌ಐ ರುಕ್ಮ ನಾಯ್ಕ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.


ಕಿಶೋರ್ ಪೂಜಾರಿ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ಸಂಪ್ಯದಲ್ಲಿ ಕಾರ್ತಿಕ್ ಮಾರ್ಲರನ್ನು ಚರಣ್ ಹತ್ಯೆ ಮಾಡಿದ್ದ. ಇದೀಗ ಜಾಮೀನಿನ ಮೇಲೆ ಚರಣ್ ಬಿಡುಗಡೆಗೊಂಡಿದ್ದ. ಇದರ ಬೆನ್ನಲ್ಲೇ ಚರಣ್ ನನ್ನು ಕೊಲೆ ಮಾಡಲಾಗಿದೆ.


0 Comments

Post a Comment

Post a Comment (0)

Previous Post Next Post