ಬೆಂಗಳೂರು: ಹಣಕ್ಕಾಗಿ ನೀಡುತ್ತಿದ್ದ ಕಿರುಕುಳ ತಾಳಲಾರದೆ ತಂದೆಯೊಬ್ಬ ಪುತ್ರನನ್ನು ರಾಡಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆಯೊಂದು ಆರ್'ಟಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಾಮುಂಡಿ ನಗರ ನಿವಾಹಿ ಮೊಹಮ್ಮದ್ ಸುಲೇಮಾನ್ (18) ಹತ್ಯೆಯಾದ ಯುವಕ.
ಆರೋಪಿ ಮೊಹಮ್ಮದ್ ಸಂಶೀರ್ (42) ಘಟನೆ ಬಳಿಕ ಪರಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ.
ಹತ್ಯೆಯಾದ ಸುಲೈಮಾನ್ ಗ್ಯಾರೇಜ್‌ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಆರೋಪಿ ಸಂಶೀರ್ ಬಾರ್ ಬೆಂಡರ್ ಆಗಿ ಕೆಲಸ ಮಾಡಿಕೊಂಡಿದ್ದ. ಹತ್ಯೆಯಾದ ಹಿಂದಿನ ದಿನ ಕೂಡ ತಂದೆ ಮಗನ ನಡುವೆ ಹಣದ ವಿಚಾರಕ್ಕೆ ಜಗಳವಾಗಿತ್ತು. ನಂತರ ಸೋಮವಾರ ಬೆಳಿಗ್ಗೆ 5.30ಕ್ಕೆ ಮತ್ತೆ ಜಗಳವಾಗಿದೆ.
ಪುತ್ರನ ಮೇಲೆ ತೀವ್ರವಾಗಿ ಕೋಪಗೊಂಡ ಸಂಶೀರ್ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ.
ಈ ವೇಳೆ ನೆಲಕ್ಕೆ ಕುಸಿದು ಬಿದ್ದ ಸುಲೈಮಾನ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನೆ ನಡೆದ ವೇಳೆ ಸುಲೈಮಾನ್ ತಾಡಿ ತಮಿಳುನಾಡಿನ ಕೃಷ್ಣಗಿರಿಗೆ ಹೋಗಿದ್ದರು ಎಂದು ತಿಳಿದುಬಂದಿದೆ.
ಆರ್'ಟಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ
Post a Comment