ಮಂಗಳೂರು: ಮಳೆಗಾಲದಲ್ಲಿ ಕಡಲು ಉಗ್ರವಾಗಿರುತ್ತದೆ. ತೆರೆಗಳು ಎತ್ತರಕ್ಕೆ ಹಾರಿಕೊಂಡು ವಿಪರೀತ ಸೆಳೆತ ಹಾಗೂ ಅಪಾಯ ಇರುತ್ತದೆ. ಮೋಜು ಮಸ್ತಿಗಾಗಿ ಮಳೆಗಾಲದಲ್ಲಿ ಕಡಲ ತೀರದಲ್ಲಿ ಯಾವುದೇ ಜೀವರಕ್ಷಕ ಸಧಾನಗಳಿಲ್ಲದೆ ಇಳಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಮನದಟ್ಟು ಮಾಡಿ, ಮನ ಒಲಿಸಿ ಅವರನ್ನು ಸಮುದ್ರಕ್ಕೆ ಇಳಿಯದಂತೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡತಕ್ಕದ್ದು. ಮಂಗಳೂರಿನ ಎಲ್ಲಾ ಎಂಟು ಪ್ರಸಿದ್ಧ ಬೀಚ್‍ಗಳಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರು ಬೀಚ್ ಗಾರ್ಡ್‍ಗಳಾಗಿ ಕೆಲಸ ನಿರ್ವಹಿಸಲಿದ್ದು ಪ್ರವಾಸಿಗರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರು ಮ್ತತು ಪೌರರಕ್ಷಣಾದಳದ ಮುಖ್ಯಪಾಲಕ ಡಾ|| ಮುರಲೀ ಮೋಹನ್ ಚೂಂತಾರು ಅವರು ನುಡಿದರು.
ದಿನಾಂಕ 08-06-2022 ನೇ ಬುಧವಾರದಂದು ಸುರತ್ಕಲ್‍ನ ಲೈಟ್ ಹೌಸ್ ಬೀಚ್ ಮತ್ತು ಸಸಿಹಿತ್ಲಿನ ಬೀಚ್‍ಗೆ ಭೆÉೀಟಿ ನೀಡಿ ಗೃಹರಕ್ಷಕರಿಗೆ ಹೆಚ್ಚಿನ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ಜಿಲ್ಲಾಧಿಕಾರಿಯವರ ಆದೇಶದಂತೆ ಈ ಬೀಚ್ ಗಾರ್ಡ್‍ಗಳು ಬೆಳಿಗ್ಗೆ 7 ರಿಂದ ರಾತ್ರಿ 7 ರವರೆಗೆ ನಿರಂತರವಾಗಿ ಎರಡು ಪಾಳಿಗಳಲ್ಲಿ ಕೆಲಸ ನಿರ್ವಹಿಸಲಿದ್ದು ಪ್ರವಾಸಿಗರನ್ನು ಬೀಚ್‍ಗೆ ಇಳಿಯದಂತೆ ನೋಡಿಕೊಳ್ಳುತ್ತಾರೆ. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಈ ಬೀಚ್ ಗಾರ್ಡ್‍ಗಳು ಎಲ್ಲಾ ಎಂಟು ಬೀಚ್‍ಗಳಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸುರತ್ಕಲ್ ಘಟಕದ ಘಟಕಾಧಿಕಾರಿ ರಮೇಶ್ ಹಾಗೂ ಪ್ರವಾಹ ರಕ್ಷಣಾ ತಂಡದ ನಿಖಿಲ್, ದಿವಾಕರ್, ಪ್ರಸಾದ್, ಮಿಥುನ್ ಮುಂತಾದವರು ಉಪಸ್ಥಿತರಿದ್ದರು.
Post a Comment