ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಂಗಳೂರು ; ನಿಲ್ಲಿಸಿದ ಬಸ್ ನಿಂದ ಹಣ ಕಳ್ಳತನ

ಮಂಗಳೂರು ; ನಿಲ್ಲಿಸಿದ ಬಸ್ ನಿಂದ ಹಣ ಕಳ್ಳತನ

 


ಮಂಗಳೂರು : ನಿಲ್ಲಿಸಿದ್ದ ಬಸ್‌ ನಿಂದ ಹಣ ಕಳವು ಮಾಡಲಾಗಿದೆ ಎನ್ನಲಾದ ಸಿಸಿ ಕೆಮರಾ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.


ಉಪ್ಪಿನಂಗಡಿ- ಸ್ಟೇಟ್‌ಬ್ಯಾಂಕ್‌ ನಡುವೆ ಸಂಚರಿಸುವ ಖಾಸಗಿ ಬಸ್‌ನ್ನು ಸ್ಟೇಟ್‌ಬ್ಯಾಂಕ್‌ನಲ್ಲಿ ಬಸ್ ನ್ನು ನಿಲ್ಲಿಸಿ ಚಾಲಕ ಮತ್ತು ನಿರ್ವಾಹಕ ಊಟಕ್ಕೆಂದು ತೆರಳಿದ್ದು ಈ ವೇಳೆ ಬಸ್‌ನೊಳಗೆ ಪ್ರವೇಶಿಸಿದ ಓರ್ವ ಬಸ್‌ನಲ್ಲಿದ್ದ ಹಣ ಕಳವು ಮಾಡಿದ ಪ್ರಕರಣ ವರದಿಯಾಗಿದೆ.


ಈ ವೇಳೆ ಬಸ್‌ನಲ್ಲಿ ಬೇರೆ ಯಾರೂ ಇರಲಿಲ್ಲ. ಕಳವು ಮಾಡಲಾಗಿದೆ ಎನ್ನಲಾದ ದೃಶ್ಯ ಬಸ್‌ನಲ್ಲಿದ್ದ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ.

ಬಸ್‌ ನಿರ್ವಾಹಕ ಬ್ಯಾಗ್‌ನಲ್ಲಿ ಸಂಗ್ರಹಿಸಿಟ್ಟಿದ್ದ ಹಣವನ್ನು ಕಳ್ಳ ದೋಚಿದ್ದಾನೆನ್ನಲಾಗಿದೆ.

ಈ ಬಗ್ಗೆ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

0 تعليقات

إرسال تعليق

Post a Comment (0)

أحدث أقدم