ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಪಠ್ಯದಿಂದ ಸಂವಿಧಾನ ಶಿಲ್ಪಿ ಪದ ತೆಗೆದಿದ್ದಕ್ಕೆ ಶಾಸಕ ಹರ್ಷವರ್ಧನ್ ಆಕ್ರೋಶ

ಪಠ್ಯದಿಂದ ಸಂವಿಧಾನ ಶಿಲ್ಪಿ ಪದ ತೆಗೆದಿದ್ದಕ್ಕೆ ಶಾಸಕ ಹರ್ಷವರ್ಧನ್ ಆಕ್ರೋಶ


ನಂಜನಗೂಡು: ಪರಿಷ್ಕೃತ ಪಠ್ಯದಿಂದ 'ಸಂವಿಧಾನ ಶಿಲ್ಪಿ' ಎಂಬ ಪದವನ್ನು ತೆಗೆದಿರುವುದು ಅತ್ಯಂತ ಖಂಡನೀಯ. ಆ ಪದವನ್ನು ತೆಗೆಯುವ ಅಗತ್ಯ ಏನಿತ್ತೋ ತಿಳಿಯದು. ಆದರೆ ಇಂತಹ ವಿಚಾರಗಳನ್ನು ನಾವು  ಸಹಿಸುವುದಿಲ್ಲ ಹಾಗೂ ಖಂಡಿತ ರಾಜಿಯಾಗುವ ಪ್ರಶ್ನೆಯೂ ಇಲ್ಲ' ಎಂದು ನಂಜನಗೂಡು ಶಾಸಕ ಬಿ. ಹರ್ಷವರ್ಧನ್ ಅವರು ಹೇಳಿದ್ದಾರೆ.


ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅವರು, ದಕ್ಷಿಣ ಪದವೀದರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೂನ್ 8 ರಂದು ಮೈಸೂರಿಗೆ ಬರುತ್ತಿದ್ದಾರೆ. ಅಂದು ರಾಜಕೀಯ ಮುತ್ಸದ್ಧಿ, ಹಿರಿಯ ಸಂಸತ್ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೆ ಭೇಟಿ ಮಾಡಿ, ಹಳೆಯ ಪಠ್ಯವನ್ನೇ ಮುಂದುವರೆಸುವಂತೆ ಒತ್ತಾಯಿಸುತ್ತೇವೆ. ಜೊತಗೆ ನೂತನ ಪಠ್ಯ ಪರಿಷ್ಕರಣೆ ಮಾಡಿ ‘ಸಂವಿಧಾನ ಶಿಲ್ಪಿ' ಎಂಬ ಪದ ತೆಗೆದಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಹಾಗೂ ಮುಂದಿನ ದಿನಗಳಲ್ಲಿ ಮುಜುಗರಕ್ಕೊಳಗಾಗುವ ಇಂತಹ ಪ್ರಕರಣಗಳು ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.


‘ಸಂವಿಧಾನ’ದಲ್ಲಿ ಕಂಡುಬರುವ ಪ್ರಖರ ಸಾಮಾಜಿಕ ಪ್ರಜ್ಞೆ, ರಾಷ್ಟ್ರೀಯತೆಯ ಪರಿಕಲ್ಪನೆ, ನ್ಯಾಯ ಮತ್ತು ಸಮಾನತೆಯ ಆಶಯಗಳಿಗೂ ಅಂಬೇಡ್ಕರ್ ಅವರು ಬರೆದ ನೂರಾರು ಲೇಖನಗಳಿಗೂ ಆಂತರಿಕ ಸಂಬಂಧವಿದೆ. ಹಾಗಾಗಿ ಡಾ.ಬಿ.ಆರ್. ಅಂಬೇಡ್ಕರ್ ಅವರು ‘ಸಂವಿಧಾನ ಶಿಲ್ಪಿ' ಹೌದು ಮತ್ತು ಎಂದೆಂದಿಗೂ ಸಂವಿಧಾನ ಶಿಲ್ಪಿಯೇ ಎಂದು ಹರ್ಷವರ್ಧನ್ ಹೇಳಿದ್ದಾರೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 Comments

Post a Comment

Post a Comment (0)

Previous Post Next Post