ಕಾಸರಗೋಡು: ರಂಗಚೇತನ ಕಾಸರಗೋಡು ಮತ್ತು ರಿದಮ್ ಮೀಡಿಯಾ ಕ್ರೀಯೇಷನ್ ರವರ ಗಡಿನಾಡ ಖ್ಯಾತ ಯುವ ರಂಗಕರ್ಮಿ ಸದಾಶಿವ ಬಾಲಮಿತ್ರರವ ಚಿತ್ರಕಥೆ, ನಿರ್ದೇಶನ, ಮೆಲ್ವಿನ್ ಮಾಸ್ಟರ್ ಪೆರ್ಮುದೆ ಹಾಗೂ ರಂಜಿತ್ ರಮಣ ಶರ್ಮರವರ ಕ್ಯಾಮರಾ, ಎಡಿಟಿಂಗ್, ಡಬ್ಬಿಂಗ್ ಮತ್ತು ಸಂಗೀತದೊಂದಿಗೆ, ಖ್ಯಾತ ಚಲನಚಿತ್ರ ನಟ ಬಾಲಕೃಷ್ಣ ಅಡೂರು, ಭರವಸೆಯ ಬೆಳಕು ಸಮನ್ವಿತಾ ಗಣೇಶ್ ಅಣಂಗೂರು ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಕನ್ನಡ ಶಾಲೆಗಳ ಐವತ್ತಕ್ಕೂ ಹೆಚ್ಚಿನ ಪ್ರತಿಭಾವಂತ ಮಕ್ಕಳು ಹಾಗೂ ರಂಗಚೇತನ ಕಾಸರಗೋಡು ಇದರ ಸದ್ಯರು ಮನೋಜ್ಞ ಅಭಿನಯ ನೀಡಿದ "ಇಕ್ಕೋ.. ನೈಜತೆಯ ಪ್ರತಿಫಲನ" ಕಿರಚಿತ್ರ ಬಿಡುಗಡೆ ಸಮಾರಂಭವು ರಂಗಚೇತನ ಕಾಸರಗೋಡು ಮತ್ತು ಬಿ.ಪಿ ಪಿ.ಎ.ಎಲ್.ಪಿ. ಶಾಲೆ ಪೆರ್ಮುದೆ ಸಹಯೋಗದೊಂದಿಗೆ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ನಡೆಯಿತು.
ಜೂನ್ 5 ವಿಶ್ವ ಪರಿಸರ ದಿನದಂದು "ಪರಿಸರೋತ್ಸವ'ದೊಂದಿಗೆ ಪೆರ್ಮುದೆ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ "ಶಾಲೆಗೊಂದು ವಿದ್ಯಾವನ" ಮುರಳಿ ಮಾಧವ ಪೆಲ್ತಾಜೆ ಅವರಿಂದ "ಒಂದೇ ಒಂದು ಭೂಮಿ" ಪರಿಸರ ಜಾಗೃತಿ ಕಾರ್ಯಾಗಾರ, ಅಪೂರ್ವ ಗಿಡಗಳ ಪ್ರದರ್ಶನ, ಪುಸ್ತಕ ಪ್ರದರ್ಶನ ಗಳು ಗಮನಸೆಳೆಯಿತು.
ನಂತರ ನಡೆದ "ಇಕ್ಕೋ..." ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ "ಲಿಮ್ಕಾ ವಿಶ್ವ ದಾಖಲೆಯ ಯೋಗ ರತ್ನ ಕು.ಅಭಿಜ್ಞಾನ ಹರೀಶ್ ಮತು yoga for kids kasaragod ತಂಡದ ಯೋಗ ನೃತ್ಯ, ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಇವರ ಶಿಷ್ಯೆಯರಾದ ತನ್ವಿ.ಕೆ.ಟಿ. ಮತ್ತು ಇಷಿಕಾ.ಕೆ.ಟಿ, ನೃತ್ಯ ವಿದೂಷಿ ವಿದ್ಯಾ ಲಕ್ಷ್ಮಿ ಯವರ ಶಿಷ್ಯ ರಾದ ಚೇತನ್ ಎಡಕ್ಕಾನ ಮತ್ತು ನೂತನ್ ಎಡಕ್ಕಾನ ರವರ ಭರತನಾಟ್ಯ, ಅರಸು ಡ್ಯಾನ್ಸ್ ಅಕಾಡೆಮಿ ಮಂಜೇಶ್ವರ ತಂಡದ ನೃತ್ಯ ರೂಪಕಗಳು ಸಾಂಸ್ಕೃತಿಕ ಸಂಭ್ರಮವನ್ನು ನೀಡಿತು.
ಸಂಜೆ ಚಲನಚಿತ್ರ ನಟ ಬಾಲಕೃಷ್ಣ ಮಾಸ್ಟರ್ ಅಡೂರು ರವರ ಅದ್ಯಕ್ಷತೆಯಲ್ಲಿ ನಡೆದ ಪರಿಸರ ಕಾಳಜಿಯ ಇಕ್ಕೋ ಕಿರುಚಿತ್ರವನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿಗಳಾದ ದಿನೇಶ್ ವಿ ಲೋಕಾರ್ಪಣೆಗೊಳಿಸಿದರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸುಜಾತ ಶಿವ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷರಾದ ಚನಿಯಪ್ಪ ನಾಯಕ್, ಮಂಜೇಶ್ವರ ಬಿ.ಆರ್.ಸಿ ಯ ಬಿಪಿಸಿ ವಿಜಯಕುಮಾರ್ ಪಾವಳ ಮೊದಲಾದವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿಗಳು ರಂಗಚೇತನ ಕಾಸರಗೋಡು ಇದರ ಗೌರವ ಅಧ್ಯಕ್ಷರು, ಯತೀಶ್ ಕುಮಾರ್ ರೈ ಮುಳ್ಳೇರಿಯ ಪ್ರಾಸ್ತಾವಿಕ ನುಡಿಗಳನ್ನು ನೀಡಿದರು. ಪತ್ರಕರ್ತೆ ವಿದ್ಯಾ ಗಣೇಶ್ ಅಣಂಗೂರು ನಿರೂಪಿಸಿದರು. ಕಾರ್ಯದರ್ಶಿ ಅಶೋಕ ಕುಮಾರ್ ಕೊಡ್ಲಮೊಗೆರು ಸ್ವಾಗತಿಸಿ, ಸದಾಶಿವ ಬಾಲಮಿತ್ರ ವಂದಿಸಿದರು. ಕಾರ್ಯಕ್ರಮ ದಲ್ಲಿ ಕಿರುಚಿತ್ರ ತಂಡದ ಎಲ್ಲಾ ಸದಸ್ಯರನ್ನು ರಂಗಚೇತನ ಕಾಸರಗೋಡು ವತಿಯಿಂದ ಗೌರವಿಸಲಾಯಿತು. ಬಳಿಕ ಕಿರುಚಿತ್ರದ ಪ್ರದರ್ಶನ ನಡೆಯಿತು.
Post a Comment